ಹಿರಿಯೂರು: ‘ಡಿಜಿಟಲ್ ತಂತ್ರಜ್ಞಾನ, ಮೊಬೈಲ್ ಬಳಕೆಯನ್ನು ನಮ್ಮ ಬದುಕಿಗೆ ನೆರಳಾಗಿಸಿಕೊಳ್ಳಬೇಕೇ ಹೊರತು ಉರುಳಾಗಿಸಿಕೊಳ್ಳಬಾರದು’ ಎಂದು ತಹಶೀಲ್ದಾರ್ ಎಂ. ಸಿದ್ದೇಶ್ ಎಚ್ಚರಿಸಿದರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ಘಟಕಗಳ ಸಮಾರೋಪ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಸತತ ಪರಿಶ್ರಮದ ಮೂಲಕ ಹೆಚ್ಚಿನ ಅಂಕ ಗಳಿಸಿ ಉತ್ತಮ ಉದ್ಯೋಗ ಪಡೆದುಕೊಳ್ಳುವತ್ತ ಗಮನ ಕೊಡಿ. 23 ವರ್ಷಕ್ಕೆ ಪದವಿ ಮುಗಿಸಿದ ನಾನು ಪೊಲೀಸ್ ಆಗಿ, ಪ್ರಥಮ ದರ್ಜೆ ಗುಮಾಸ್ತನಾಗಿ, ಕಾಲೇಜು ಉಪನ್ಯಾಸಕನಾಗಿ, ಕೊನೆಗೆ ತಹಶೀಲ್ದಾರ್ ಹುದ್ದೆ ಪಡೆದಿರುವೆ. ಇದೆಲ್ಲದರ ಹಿಂದೆ ಸತತ ಪರಿಶ್ರಮವಿದೆ’ ಎಂದು ತಿಳಿಸಿದರು.

‘ವಾಣಿ ಕಾಲೇಜು ಉತ್ತಮ ಶೈಕ್ಷಣಿಕ ಪರಿಸರ ಹೊಂದಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗುವ ರೀತಿಯಲ್ಲಿ ಕಾಲೇಜನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ದಿವಂಗತ ಡಿ. ಸುಧಾಕರ್ ಅವರಿಗೆ ಸಲ್ಲುತ್ತದೆ’ ಎಂದು ದಾವಣಗೆರೆ ವಿ.ವಿ ಸಿಂಡಿಕೇಟ್ ಸದಸ್ಯ ಎಚ್. ತಿಪ್ಪೇಸ್ವಾಮಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಡಿ.ಧರಣೇಂದ್ರಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗಿಡ್ಡೋಬನಹಳ್ಳಿ ಅಶೋಕ್, ವಾಣಿವಿಲಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ, ನಿವೃತ್ತ ಪ್ರಾಂಶುಪಾಲ ಪ್ರೊ. ಶಿವಲಿಂಗಪ್ಪ ಮಾತನಾಡಿದರು.

ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಲೋಕೇಶ್ ಮಾಳಿಗೆ, ಜಗನ್ನಾಥ್, ದಿವಾಕರ್ ಹಳೆ ಯಳನಾಡು, ಪ್ರೊ. ಹೇಮಲತಾ, ಪ್ರೊ. ಗಂಗಾಧರ್, ಲಕ್ಷ್ಮಣ್ ನಾಯ್ಕ, ಮಹಮ್ಮದ್ ಸಾದತ್, ಶ್ರೀಧರ್ ಯಾದವ್, ಬಸವರಾಜ್ ಬಳಗಟ್ಟ, ಪ್ರೊ.ದೇವಿಕಾ, ಮಹಂತೇಶ್, ಎಸ್.ಎಲ್.ಎನ್. ಮೂರ್ತಿ, ಪ್ರೊ. ವೆಂಕಟೇಶ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-44-488729572

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.