ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯ ನೋಡಲು ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರೊಬ್ಬರು ಕಳೆದುಕೊಂಡಿದ್ದ ₹30,000 ಮೌಲ್ಯದ ಮೊಬೈಲ್ ಅನ್ನು ಹಿಂದಿರುಗಿಸುವ ಮೂಲಕ ಇಲ್ಲಿನ ಗೃಹರಕ್ಷಕ ದಳದ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಬೆಂಗಳೂರಿನ ಸೆಲ್ವಂ ಅವರು ಮೊಬೈಲ್ ಕಳೆದುಕೊಂಡಿದ್ದರು. ಅಣೆಕಟ್ಟೆಯ ಕಾವಲಿಗೆ ನೇಮಕಗೊಂಡಿರುವ ಗೃಹರಕ್ಷಕ ದಳದ ಸಿಬ್ಬಂದಿ ಪರಂಧಾಮ ಅವರು ಮೊಬೈಲ್ ಅನ್ನು ಹಿಂದಿರುಗಿಸಿದ್ದಾರೆ.
ಜಲಾಶಯ ವೀಕ್ಷಣೆಗೆ ಶನಿವಾರ ಬಂದಿದ್ದ ಸೆಲ್ವಂ ಅವರು ಕಳೆದುಕೊಂಡಿದ್ದ ಮೊಬೈಲ್ ಪರಂಧಾಮ ಅವರಿಗೆ ಸಿಕ್ಕಿತ್ತು. ದೂರವಾಣಿ ಮೂಲಕ ಮೊಬೈಲ್ ಸಿಕ್ಕಿರುವುದನ್ನು ಪರಂಧಾಮ ತಿಳಿಸಿದ್ದರು. ಸೆಲ್ವಂ ಅವರು ಭಾನುವಾರ ಅಣೆಕಟ್ಟೆ ಬಳಿ ತಮ್ಮ ಮೊಬೈಲ್ ಪಡೆದುಕೊಂಡರು.
ಈ ಹಿಂದೆಯೂ, ಯುವತಿಯೊಬ್ಬರ ಬೆಲೆ ಬಾಳುವ ಕೈಗಡಿಯಾರ, ಮೊಬೈಲ್ ಮತ್ತು ನಗದು ಇದ್ದ ಪರ್ಸ್ ಹಾಗೂ ಮತ್ತೊಬ್ಬ ಮಹಿಳೆಯ ಪರ್ಸ್ ಅನ್ನು ಮಾಲೀಕರಿಗೆ ಹಿಂದಿರುಗಿಸಿ ಪರಂಧಾಮ ಅವರು ಮೆಚ್ಚುಗೆಗೆ ಪಾತ್ರರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.