ಹಿರಿಯೂರು: ಸಕಾಲದಲ್ಲಿ ಮಳೆ ಆಗಲೆಂದು ಪ್ರಾರ್ಥಿಸಿ ತಾಲ್ಲೂಕಿನ ಜವನಗೊಂಡನಹಳ್ಳಿಯ ಗಾಯತ್ರಿ ಅಣೆಕಟ್ಟೆ ಕೆಳಭಾಗದಲ್ಲಿರುವ ಬಾಲಕೃಷ್ಣಸ್ವಾಮಿ ದೇವರಿಗೆ ಶನಿವಾರ ಸ್ಥಳೀಯ ಮುಖಂಡರು ಪೂಜೆ ಸಲ್ಲಿಸಿದರು.

‘ರಾಜ್ಯದ ಬಹುತೇಕ ಕಡೆ ಮಳೆಯಾಗಿದೆ. ಆದರೆ, ಬರಗಾಲಕ್ಕೆ ಕುಖ್ಯಾತಿ ಪಡೆದಿರುವ ಜವನಗೊಂಡನಹಳ್ಳಿಯ ಮೇಲೆ ವರುಣ ದೇವ ಮುನಿಸಿಕೊಂಡಂತೆ ಕಾಣುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರ ಮುಂದುವರಿದಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ ಬೇಸರ ವ್ಯಕ್ತಪಡಿಸಿದರು.

‘ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುತ್ತಾರೆ ಎಂಬ ಭರವಸೆ ಮೇರೆಗೆ ರೈತರು ನೂರಾರು ಎಕರೆಯಲ್ಲಿ ಅಡಿಕೆ, ತೆಂಗು, ದಾಳಿಂಬೆ ನಾಟಿ ಮಾಡಿದ್ದಾರೆ. ತುಮಕೂರು ಶಾಖಾ ಕಾಲುವೆಯ ಮೂಲಕ ಗಾಯತ್ರಿ ಅಣೆಕಟ್ಟೆಗೆ ನೀರು ತುಂಬಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಕಾಲುವೆ ಕಾಮಗಾರಿ ಅಜ್ಜಂಪುರ ಸಮೀಪದ ವೈ ಜಂಕ್ಷನ್ನಿಂದ ಮುಂದುವರೆಯದೇ ಇರುವುದು ಈ ಭಾಗದ ಜನರಲ್ಲಿ ಬೇಸರ ಮೂಡಿಸಿದೆ’ ಎಂದು ಹೇಳಿದರು.

‘ಹೋಬಳಿಯ ಕೆರೆಗಳಿಗೆ ವಾಣಿವಿಲಾಸ ಅಣೆಕಟ್ಟೆಯಿಂದ ನೀರು ತುಂಬಿಸುವಂತೆ ಆಗ್ರಹಿಸಿ ರೈತರು ಧರಣಿ ನಡೆಸಿದ್ದರು. ರೈತರ ಒತ್ತಡಕ್ಕೆ ಸ್ಪಂದಿಸಿದ್ದ ಡಿ. ಸುಧಾಕರ್ ಅವರು ಸರ್ಕಾರದಿಂದ ಹೋಬಳಿಯ ಗಾಯತ್ರಿ ಅಣೆಕಟ್ಟೆಯೂ ಒಳಗೊಂಡು 17 ಕೆರೆಗಳಿಗೆ ನೀರು ತುಂಬಿಸಲು 0.307 ಟಿಎಂಸಿ ಅಡಿ ನೀರನ್ನು ಮಂಜೂರು ಮಾಡಿಸಿ ಸಣ್ಣ ನೀರಾವರಿ ಇಲಾಖೆ ಮೂಲಕ ಕಾಮಗಾರಿ ಆರಂಭಿಸಲು ಟೆಂಡರ್ ಹಂತಕ್ಕೂ ಪ್ರಯತ್ನ ನಡೆಸಿದ್ದರು. ಆದರೆ, ಸಚಿವರ ನಿಧನದಿಂದ ಕೆರೆಗಳಿಗೆ ನೀರು ಯಾವಾಗ ಬರುತ್ತದೆ ಎಂದು ಕಾಯುವಂತಾಗಿದೆ’ ಎಂದು ಪಾಪಣ್ಣ ಆತಂಕ ವ್ಯಕ್ತಪಡಿಸಿದರು.

‘ಬಾಲಕೃಷ್ಣಸ್ವಾಮಿ ನಂಬಿದವರನ್ನು ಕೈಬಿಡುವುದಿಲ್ಲ ಎಂಬುದು ಈ ಭಾಗದ ಜನರ ನಂಬಿಕೆ. ವರುಣನ ಕೃಪೆಯಿಂದ ಕೆರೆಗಳಿಗೆ ನೀರು ಬರಲಿ, ಸರ್ಕಾರ ಮಂಜೂರು ಮಾಡಿರುವ ಯೋಜನೆಯನ್ನು ಶೀಘ್ರ ಕಾರ್ಯಗತಗೊಳಿಸಲಿ. ಇದರ ಜೊತೆ ಗಾಯತ್ರಿ ಅಣೆಕಟ್ಟೆಯ ಕೋಡಿ ಎತ್ತರಿಸಬೇಕು. ಹೂಳು ತೆಗೆಯಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ನಾಗೇಂದ್ರಪ್ಪ, ವೀರೇಶ್, ಈಶ್ವರಪ್ಪ, ಜಯರಾಮಯ್ಯ ಮೊದಲಾದವರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-44-1885054280

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.