ಹಿರಿಯೂರು: ನಗರದ ತೇರುಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿರುವ ಕಾಳಿಕಾಂಬ ದೇವಿಯ ರಥೋತ್ಸವ ಸೋಮವಾರ ಸರಳವಾಗಿ ನೆರವೇರಿತು.

ರಥೋತ್ಸವಕ್ಕೂ ಮೊದಲು ದೇವಾಲಯದಲ್ಲಿ ಹೋಮ, ಗಂಗಾಪೂಜೆ, ಗಣಪತಿ ಪೂಜೆ, ಪುಷ್ಪಾರ್ಚನೆ, ಅಭಿಷೇಕ ಹಾಗೂ ಲೋಕಕಲ್ಯಾಣಕ್ಕಾಗಿ ವಿವಿಧ ಧಾರ್ಮಿಕ ಪೂಜೆಗಳನ್ನು ನಡೆಸಲಾಯಿತು.

ತೇರುಮಲ್ಲೇಶ್ವರ ಸ್ವಾಮಿ ದೇವಾಲಯ ದಿಂದ ಹೊರಟ ರಥ ಸಿದ್ದನಾಯಕ ವೃತ್ತದವರೆಗೆ ಸಾಗಿತು. ರಥಬೀದಿ ಯಲ್ಲಿನ ಮನೆಯ ಮುಂದೆ ದೇವಿಯ ರಥ ಬಂದಾಗ ಭಕ್ತರು ಪೂಜೆ ಸಲ್ಲಿಸಿದರು. ರಥೋತ್ಸವದ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನದಾಸೋಹ ಕಾರ್ಯಕ್ರಮ ನಡೆಯಿತು.

ಉತ್ಸವದಲ್ಲಿ ಅರ್ಚಕರಾದ ವಿಶ್ವನಾಥಾಚಾರ್ಯ, ನಾಗರಾಜಾ ಚಾರ್ಯ, ಮಂಜುನಾಥ್, ರಮೇಶ್, ನವೀನ್, ಬಸವರಾಜ್, ವಿನಯ್, ಜ್ಞಾನಮೂರ್ತಿ, ಜಗದೀಶ್ ಭಂಡಾರಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-44-11143920

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.