ಹಿರಿಯೂರು: ‘ನಗರದ ಹುಳಿಯಾರು ರಸ್ತೆಯ ನಾಲ್ಕನೇ ತಿರುವಿನಲ್ಲಿರುವ ಓಂ ಶಕ್ತಿ ಅರ್ಧನಾರೀಶ್ವರಿ ಕರುಮಾರಿಯಮ್ಮ ದೇವಾಲಯದಲ್ಲಿ ಮೇ 13ರಿಂದ 15ರವರೆಗೆ 23ನೇ ವರ್ಧಂತ್ಯುತ್ಸವ ಹಾಗೂ ಮಹಾ ಚಂಡಿಕಾ ಹೋಮ, ಬ್ರಹ್ಮ ರಥೋತ್ಸವ ಏರ್ಪಡಿಸಲಾಗಿದೆ’ ಎಂದು ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಮೇ 13ರಂದು ಬೆಳಿಗ್ಗೆ ಗಂಗಾಪೂಜೆ, ಗೋಪೂಜೆ, ಕಂಕಣ ಬಂಧನ, ಧ್ವಜಾರೋಹಣ ಹಾಗೂ ವಿಶೇಷ ಅಲಂಕಾರ ನಡೆಸಲಾಗುವುದು. ಸಂಜೆ 6 ಗಂಟೆಯ ನಂತರ ಗಣಪತಿ, ನವಗ್ರಹ ಹೋಮ ನಡೆಯಲಿದೆ. 14 ರಂದು ಬೆಳಿಗ್ಗೆ 7 ಗಂಟೆಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಮಹಾ ಸುದರ್ಶನ ಹೋಮ, ಕುಬೇರ, ಮಹಾಲಕ್ಷ್ಮಿ ಹೋಮ, ವೆಂಕಟೇಶ್ವರ ಸ್ವಾಮಿ ಉತ್ಸವ ಮೂರ್ತಿಗಳಿಗೆ ಏಕದಶಾವರ ಮಹಾಭಿಷೇಕ ಜರುಗಲಿದೆ.

ಮೇ 15ರಂದು ಬೆಳಿಗ್ಗೆ ಮಹಾ ಚಂಡಿಕಾ ಹೋಮ ನಡೆಯಲಿದೆ. ಸಂಜೆ ಊರಿನ ಮುಖ್ಯ ಬೀದಿಗಳಲ್ಲಿ ರಥೋತ್ಸವ ನಡೆಯಲಿದೆ. 16ರಂದು ಕಂಕಣ ವಿಸರ್ಜನೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್ ನವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.