ಹಿರಿಯೂರು: ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಕಾರ್ಯ ವ್ಯಾಪ್ತಿ ಪ್ರಸ್ತುತ ಕೆಲವು ಪ್ರಾಂತಗಳಿಗೆ ಅದರಲ್ಲೂ ಒಂದೆರಡು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದು, ನಿಗಮದ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವಂತೆ ಮಾವು ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.

ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ನಿಗಮಕ್ಕೆ ಭೇಟಿ ನೀಡಿದ್ದ ಸಂಘದ ಅಧ್ಯಕ್ಷ ಎ. ಶಿವರಾಂ, ಕಾರ್ಯದರ್ಶಿ ಬಿ. ಶಿವಮೂರ್ತಿ ಹಾಗೂ ಮಾವು ಬೆಳೆಗಾರ ಎಂ.ಡಿ. ವೇದಮೂರ್ತಿ, ‘ಹಿರಿಯೂರು ತಾಲ್ಲೂಕು ಹಲವು ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ಧವಾಗಿದ್ದು, ಒಂದು ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಮಾವು ಬೆಳೆಯುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಇಂದಿಗೂ ಉಳಿದಿದೆ. ಹೀಗಾಗಿ ಮಾವು ಅಭಿವೃದ್ಧಿ ನಿಗಮದ ಯೋಜನೆಗಳು ಇಂತಹ ಜಿಲ್ಲೆಗಳನ್ನು ತಲುಪಬೇಕಾದ ಅಗತ್ಯವಿದೆ’ ಎಂದರು.

‘ಹಿರಿಯೂರು ತಾಲ್ಲೂಕಿನಲ್ಲಿ ಆಲ್ಫಾನ್ಸೊ, ಮಲ್ಲಿಕಾ, ಸೆಂದೂರ, ತೋತಾಪುರಿ, ರಸಪೂರಿ ಮೊದಲಾದ ತಳಿಗಳ ಉತ್ಕೃಷ್ಟ ಹಣ್ಣು ಬೆಳೆಯುತ್ತಿದ್ದೇವೆ. ಐದಾರು ವರ್ಷಗಳಿಂದ ಅತಿಯಾದ ಬಿಸಿಲು, ಅಕಾಲಿಕ ಆಲಿಕಲ್ಲು ಮಳೆ, ಬಿರುಗಾಳಿ, ಕೀಟಬಾಧೆಗಳಿಂದ ಇಳುವರಿ ಕುಂಠಿತಗೊಂಡು ಮಾವು ಬೆಳೆಗಾರರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ನಿರ್ವಹಣಾ ವೆಚ್ಚವೂ ಬೆಳೆಗಾರರಿಗೆ ಸಿಕ್ಕಿಲ್ಲ. ಮಾವು ಬೆಳೆಯಿಂದ ನಷ್ಟಕ್ಕೆ ಒಳಗಾದ ಕೆಲವು ರೈತರು ಮಾವಿನ ಗಿಡಗಳನ್ನು ಕತ್ತರಿಸಿ ಹೆಚ್ಚು ಲಾಭ ತರುವ ಬೇರೆ ಬೆಳೆಗಳತ್ತ ಮುಖ ಮಾಡಿದ್ದಾರೆ’ ಎಂದು ಶಿವರಾಂ ತಿಳಿಸಿದರು.

ಬೇಡಿಕೆ: ಪ್ರತಿ ಋತುವಿನಲ್ಲೂ ವಿವಿಧ ತಿಂಗಳುಗಳಲ್ಲಿ ಮಾವು ಬೆಳೆಗಾರರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ನಮ್ಮ ಸಂಸ್ಥೆ ಮೂಲಕ ಕೊಡಿಸಬೇಕು. ಮಾವು ಬೆಳೆಗಾರರು ಬಳಸುವ ಕ್ರೇಟರ್ ಮತ್ತಿತರೆ ಸಲಕರಣೆಗಳನ್ನು ನಿಗಮದ ಮೂಲಕ ಸಹಾಯಧನದೊಂದಿಗೆ ನೀಡಬೇಕು. ಮಾವಿನ ಹಣ್ಣುಗಳಿಗೆ ಉತ್ತಮ ಬೆಲೆ ಸಿಗುವಂತೆ ನಿಗಮ ಕೈಗೊಂಡಿರುವ ‘ಮ್ಯಾಂಗೋ ಪಿಕ್ಕಿಂಗ್’ ಕಾರ್ಯಕ್ರಮಕ್ಕೆ ಹಿರಿಯೂರು ತಾಲ್ಲೂಕಿನ ರೈತರನ್ನೂ ಸೇರ್ಪಡೆ ಮಾಡಿಕೊಳ್ಳಬೇಕು. ನಿಗಮದಿಂದ ನಡೆಸುವ ಯಾವುದೇ ರೀತಿಯ ಮಾವು ರೈತ ಸ್ನೇಹಿ ಕಾರ್ಯಕ್ರಮಗಳನ್ನು ನಮ್ಮ ಸಂಘದ ಮೂಲಕ ಬೆಳೆಗಾರರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು’ ಶಿವಮೂರ್ತಿ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-44-1151321781

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.