ಹಿರಿಯೂರು: ಮಳೆಗಾಲ ಆರಂಭಕ್ಕೂ ಮೊದಲು ನಗರದಲ್ಲಿರುವ ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿರುವ ನಗರಸಭೆ ಆಡಳಿತದ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಪೌರಾಯುಕ್ತ ಎ. ವಾಸೀಂ ಅವರು ಆರೋಗ್ಯ ನಿರೀಕ್ಷಕರು ಹಾಗೂ ಪೌರ ನೌಕರರ ಸಭೆ ನಡೆಸಿ, ಅಕಾಲಿಕ ಮಳೆಯಿಂದ ಉಂಟಾಗಬಹುದಾದ ಹಾನಿ ತಡೆಯಲು ಆಶ್ರಯ ಕಾಲೊನಿಯಿಂದ ಆರಂಭವಾಗುವ ರಾಜಕಾಲುವೆ, ವಾಗ್ದೇವಿ ಶಿಕ್ಷಣ ಸಂಸ್ಥೆ ಮತ್ತು ಕಟುಗರ ಹಳ್ಳದ ರಾಜಕಾಲುವೆಗಳನ್ನು ಗುರುವಾರ ಸ್ವಚ್ಛಗೊಳಿಸಿದ್ದಾರೆ.

‘ಹಿಂದಿನ ವರ್ಷ ಒಂದೇ ರಾತ್ರಿ 90 ಮಿ.ಮೀಗಿಂತ ಹೆಚ್ಚು ಮಳೆ ಸುರಿದ ಕಾರಣ ರಾಜ ಕಾಲುವೆಗಳಿಂದ ನೀರು ಹೊರಬಂದು ಬಡಾವಣೆಗಳಿಗೆ ನುಗ್ಗಿತ್ತು. ಹಾಗಾಗಿ ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸಿದ್ದೇವೆ. ನಗರ ನಿವಾಸಿಗಳು ಮನೆಯ ತ್ಯಾಜ್ಯವನ್ನು ರಾಜ ಕಾಲುವೆಗೆ ಸುರಿಯಬಾರದು. ಜೊತೆಗೆ ಮನೆಯ ಮುಂದಿನ ಬಾಕ್ಸ್ ಚರಂಡಿಗಳ ಮೇಲೆ ಕಾಂಪೌಂಡ್ ನಿರ್ಮಿಸದಂತೆ, ಕಾಲುವೆ ಒತ್ತುವರಿ ಮಾಡದಂತೆ ಮನೆ ಮಾಲೀಕರಿಗೆ ಮನವಿ ಮಾಡಿದ್ದೇವೆ. ಈ ರೀತಿ ಮಾಡುವುದರಿಂದ ಮಳೆಯ ನೀರು ಕಟ್ಟಿಕೊಂಡು ಒತ್ತಡ ಹೆಚ್ಚಾದಾಗ ನೀರು ಒಮ್ಮೆಲೆ ನುಗ್ಗುತ್ತದೆ. ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮನೆ ಮಾಲೀಕರು ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ ಅನಿವಾರ್ಯ’ ಎಂದು ಪೌರಾಯುಕ್ತ ವಾಸೀಂ ಎಚ್ಚರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-44-982376235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.