ಹಿರಿಯೂರು: ಬಿಪಿಎಲ್ ಹಾಗೂ ಅಂತ್ಯೋದಯ ಫಲಾನುಭವಿಗಳು ಪಡಿತರ ಧಾನ್ಯ ಪಡೆಯಲು ಪರದಾಡುತ್ತಿದ್ದಾರೆ.

ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 80 ನ್ಯಾಯಬೆಲೆ ಅಂಗಡಿಗಳು, ಹಿರಿಯೂರು ನಗರದಲ್ಲಿ 10 ಅಂಗಡಿಗಳು ಒಳಗೊಂಡು 90 ನ್ಯಾಯಬೆಲೆ ಅಂಗಡಿಗಳಿದ್ದು, ಇದರಲ್ಲಿ (20 ಕೃಷಿ ಪತ್ತಿನ ಸಹಕಾರ ಸಂಘಗಳಿವೆ) ಪ್ರತಿ ತಿಂಗಳು 70 ಸಾವಿರ ಫಲಾನುಭವಿಗಳು ಪಡಿತರ ಪಡೆಯುತ್ತಿದ್ದಾರೆ. ಆದರೆ, ಈ ಬಾರಿ ತಿಂಗಳು ಮುಗಿಯುತ್ತ ಬಂದರೂ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆ ಸಾಧ್ಯವಾಗಿಲ್ಲ.

‘ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗೆ ನಿತ್ಯ ಅಲೆಯುವಂತಾಗಿದೆ. ಸರ್ವರ್ ಸರಿ ಇಲ್ಲ ಎಂದು ನ್ಯಾಯಬೆಲೆ ಅಂಗಡಿಯವರು ಹೇಳುತ್ತಿದ್ದು, ನಿತ್ಯ ಅಲೆದಾಡಿ ಸುತ್ತಾಗಿರುವ ಜನರು ಹಿಡಿ ಶಾಪ ಹಾಕಿ ಹೋಗುತ್ತಾರೆ. ಕೆಲವರು ತಾಳ್ಮೆ ಕಳೆದುಕೊಂಡು ಹಲ್ಲೆಗೂ ಮುಂದಾಗಿದ್ದಾರೆ’ ಎಂದು ವಿ.ವಿ. ಪುರ ಪ್ರಾಥಮಿಕ ಸಹಕಾರ ಸಂಘದ ಕಾರ್ಯದರ್ಶಿ ಎಸ್.ಎಸ್. ರಂಗಪ್ಪ ಬೇಸರ ವ್ಯಕ್ತಪಡಿಸಿದರು.

‘ಸರ್ವರ್ ಸರಿ ಇದ್ದರೆ ದಿನಕ್ಕೆ 200ರಿಂದ 300 ಫಲಾನುಭವಿಗಳಿಗೆ ಪಡಿತರ ವಿತರಿಸಬಹುದು. ಆದರೆ, ಸರ್ವರ್ ಸಮಸ್ಯೆಯಿಂದ ದಿನದಲ್ಲಿ 25ರಿಂದ 50 ಜನರಿಗೆ ಮಾತ್ರ ಪಡಿತರ ಕೊಡಲು ಸಾಧ್ಯವಾಗುತ್ತಿದೆ. ಸರ್ಕಾರ ತಕ್ಷಣವೇ ಇತ್ತ ಗಮನಹರಿಸಿ ಪಡಿತರ ವಿತರಣೆಯಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರ ಉಚಿತವಾಗಿ ಪಡಿತರ ಕೊಡುತ್ತದೆ ಎಂಬ ಕಾರಣಕ್ಕೆ ಕೂಲಿಗೆ ಹೋಗುವುದನ್ನು ಬಿಟ್ಟು ನ್ಯಾಯಬೆಲೆ ಅಂಗಡಿಗೆ ಅಲೆದಾಡುತ್ತಿದ್ದೇವೆ. ದಿನದ ಕೂಲಿಯನ್ನು ಯಾರು ಕೊಡುತ್ತಾರೆ? ಆದಷ್ಟು ಬೇಗ ಸರ್ಕಾರ ಸರ್ವರ್ ಸಮಸ್ಯೆ ಸರಿಪಡಿಸಬೇಕು ಅಥವಾ ತಾಂತ್ರಿಕಾಂಶ ರಹಿತ ಪಡಿತರ ವಿತರಣೆ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ವಿ.ವಿ. ಪುರದ ಕರಿಯಮ್ಮ ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-44-1934647714

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.