ಹಿರಿಯೂರು: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಬಸ್ ನಿಲುಗಡೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಸೋಮವಾರ ಎಬಿವಿಪಿ ನೇತೃತ್ವದಲ್ಲಿ ನಗರದ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ನಗರದ ಪ್ರಧಾನ ರಸ್ತೆಗೆ ಹೊಂದಿಕೊಂಡಿರುವ ವಾಣಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಬಸ್ ನಿಲ್ದಾಣದಿಂದ ಒಂದೂವರೆ ಕಿ.ಮೀ. ದೂರವಿದೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು 7 ಕಿ.ಮೀ. ದೂರದಲ್ಲಿದೆ. ವೇದಾವತಿ ಪ್ರಥಮ ದರ್ಜೆ ಕಾಲೇಜು 3 ಕಿ.ಮೀ. ದೂರದಲ್ಲಿದೆ. ನಿತ್ಯ ಈ ಕಾಲೇಜುಗಳಿಗೆ ಆಟೊದಲ್ಲಿ ಹೋಗಿ ಬರಲು ಸಾಧ್ಯವಿಲ್ಲ. ಈ ಎಲ್ಲಾ ಕಾಲೇಜುಗಳ ಮುಂದೆ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು ಸಂಚರಿಸುವ ಕಾರಣ ಕೋರಿಕೆಯ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ವಿಶೇಷವಾಗಿ ಚಿತ್ರದುರ್ಗ– ಹಿರಿಯೂರು ನಡುವೆ ಸಂಚರಿಸುವ ಬಸ್ಸುಗಳು ಈ ಕಾಲೇಜುಗಳ ಮುಂದೆ ಸೇವಾ ರಸ್ತೆಯಲ್ಲಿ ಹೋಗುವಂತೆ ಸಂಬಂಧಿಸಿದವರು ಸೂಚನೆ ನೀಡಬೇಕು’ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

‘ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲಿ ಯಲ್ಲದಕೆರೆಯಿಂದ ಬರುತ್ತಿದ್ದ ಬಸ್ ಒಂದು ದಿನ ಬರಲೇ ಇಲ್ಲ. ಹೀಗಾದರೆ ಪರೀಕ್ಷೆ ಬರೆಯುವವರಿಗೆ ಆತಂಕ ಆಗುವುದಿಲ್ಲವೇ? ಗ್ರಾಮೀಣ ಭಾಗದಿಂದ ನಗರದ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಧರ್ಮಪುರ, ಜವನಗೊಂಡನಹಳ್ಳಿ, ಐಮಂಗಲ ಹೋಬಳಿಯ ವಿದ್ಯಾರ್ಥಿಗಳ ಗೋಳು ಹೇಳತೀರದು. ಕಾಲೇಜು ಆರಂಭದ ಸಮಯ ಬೆಳಿಗ್ಗೆ 8.30ರಿಂದ 9.30ರವರೆಗೆ ಹಾಗೂ ಸಂಜೆ 4ರಿಂದ 5 ಗಂಟೆಯವರೆಗೆ ಧರ್ಮಪುರದಿಂದ ಶಿರಾ ಮಾರ್ಗದಲ್ಲಿ ಬಸ್ ನಿಲುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಘಟಕದ ಕಾರ್ಯದರ್ಶಿ ವೀರೇಶ್ ಯಾದವ್, ಕುಬೇರ್ ಯಾದವ್, ಸುದೀಪ್, ಕನಕರಾಜ್ ಕೋಡಿಹಳ್ಳಿ, ಟಿ.ತರುಣ್ ಕುಮಾರ್, ಚೇತನ್, ಅಕ್ಷಯ್ ಕುಮಾರ್, ರಮೇಶ್, ಓಬಳೇಶ್, ತಿಪ್ಪೇಸ್ವಾಮಿ, ರಂಗನಾಥ್, ಚಿದಾನಂದ, ಪುರುಷೋತ್ತಮ್, ಕಾವ್ಯಾ, ರಕ್ಷಿತಾ, ಭೂಮಿಕಾ, ಭವಾನಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-44-1666473874

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.