ಹಿರಿಯೂರು: ‘ತಾಲ್ಲೂಕಿನ ವಾಣಿವಿಲಾಸ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ಏ. 21ರಿಂದ ನೀರು ಬಿಡಲಾಗಿದ್ದು, ಕೆಲವರು ಜನರೇಟರ್ ಮೂಲಕ ನಾಲೆಯಿಂದ ನೀರೆತ್ತಿ ಟ್ಯಾಂಕರ್ಗಳ ಮೂಲಕ ಸಾಗಿಸುತ್ತಿದ್ದಾರೆ’ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಆಕ್ರೋಶ ವ್ಯಕ್ತಪಡಿಸಿದರು.

‘40 ಸಾವಿರ ಲೀಟರ್ ಸಾಮರ್ಥ್ಯದ 15–20 ಟ್ಯಾಂಕರ್ಗಳಲ್ಲಿ ನಿತ್ಯ ನೀರು ತುಂಬಿ ಒಯ್ಯಲಾಗುತ್ತಿದೆ. 40 ಸಾವಿರ ಲೀಟರ್ ಟ್ಯಾಂಕರ್ಗೆ ನೀರು ತುಂಬಿಸಲು ₹ 800, 12–16 ಸಾವಿರ ಲೀಟರ್ ವಾಹನವಾದರೆ ₹ 500 ಪಡೆಯಲಾಗುತ್ತಿದೆ. 40 ಸಾವಿರ ಲೀಟರ್ ಟ್ಯಾಂಕರ್ ನೀರನ್ನು 20 ಸಾವಿರ ಮೊತ್ತಕ್ಕೆ ಮಾರಲಾಗುತ್ತಿದೆ. ರೈತರ ತೋಟಗಳು ಒಣಗುತ್ತಿರುವುದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.

ನಿಯಮ ಮೀರಿ ಟ್ಯಾಂಕರ್ಗಳಲ್ಲಿ ನೀರು ತುಂಬುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಯಕುಮಾರ್ ಗ್ರಾಮಾಂತರ ಪೊಲೀಸ್ ಠಾಣೆಗೆ ಮೇ 8ರಂದು ದೂರು ಸಲ್ಲಿಸಿದ್ದು, ನಾಲ್ಕು ದಿನ ಕಳೆದರೂ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ.

‘ಏ. 21ರಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಟ್ಟಿದ್ದೇವೆ. ಆದರೆ, ಕೊನೆಯ ಭಾಗಕ್ಕೆ ನೀರು ತಲುಪಿಲ್ಲ ಎಂದು ರೈತರು ಕಚೇರಿ ಮುಂದೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ನಾಲೆಯಲ್ಲಿ ಜನರೇಟರ್ ಇಟ್ಟು ನೀರು ತುಂಬಿದರೆ ನೀರಿನ ವೇಗ ಕಡಿಮೆಯಾಗಿ ಕೊನೆಯ ಭಾಗಕ್ಕೆ ನೀರು ಹೋಗುವುದಿಲ್ಲ. ನೀರು ತುಂಬದಂತೆ ಟ್ಯಾಂಕರ್ ಮಾಲೀಕರಿಗೆ ತಿಳಿಸಿದರೆ, ಕಷ್ಟಪಟ್ಟು ಬೆಳೆಸಿರುವ ರೈತರ ಅಡಿಕೆ–ತೆಂಗಿನ ತೋಟಗಳು ಒಣಗುತ್ತಿವೆ, ಅವರು ಕೊಟ್ಟಷ್ಟು ಹಣ ಪಡೆದು ನೀರು ಕೊಡುತ್ತಿದ್ದೇವೆ ಎಂದು ಸಬೂಬು ಹೇಳುತ್ತಿದ್ದಾರೆ. ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗಕ್ಕೆ ನೀರು ಕೊಡಬೇಕೆ? ಟ್ಯಾಂಕರ್ ಮಾಲೀಕರ ಮಾತು ಕೇಳಿ ಸುಮ್ಮನಿರಬೇಕೆ? ಒಂದೂ ತೋಚದೆ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಜಯಕುಮಾರ್ ಹೇಳಿದರು.

ತಾಲ್ಲೂಕಿನ ಸೂರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತವನಿಧಿ ಗ್ರಾಮದ ಮಹಿಳೆಯರು ಮಂಗಳವಾರ ಕುಡಿಯುವ ನೀರು ಕೊಡಿ ಎಂದು ಖಾಲಿ ಕೊಡಗಳೊಂದಿಗೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಕುಂಟಪ್ಪನಹಟ್ಟಿಯಲ್ಲಿ ತಿಳಿದಾಗೊಮ್ಮೆ ಬರುವ ಟ್ಯಾಂಕರ್ ನೀರನ್ನು ಒಬ್ಬರ ಮೇಲೆ ಒಬ್ಬರು ಬಿದ್ದು ಗ್ರಾಮಸ್ಥರು ತುಂಬಿಕೊಳ್ಳುತ್ತಿದ್ದಾರೆ. ದಿಂಡಾವರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಾಡದ ಪೂಜೆಗಳೇ ಇಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಟ್ಯಾಂಕರ್ ಮೂಲಕ ನೀರು ಸಾಗಿಸುವುದು ದಂಧೆಯಾಗಿ ಮಾರ್ಪಟ್ಟಿರುವ ಕಾರಣ ಪೊಲೀಸರು ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು. ತೋಟಗಳನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ರೈತರ ನೆರವಿಗೆ ಜಿಲ್ಲಾಧಿಕಾರಿ ಧಾವಿಸಬೇಕು ಎಂದು ತಾಲ್ಲೂಕು ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಬಳಗಟ್ಟ ವೆಂಕಟೇಶ್ ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-44-288517801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.