ಹಿರಿಯೂರು: ‘ತಾಲ್ಲೂಕಿನ ಕಲ್ಲುವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಜೂನ್ 1 ರಂದು ಸೂರಪ್ಪನಹಟ್ಟಿ ಗೇಟ್ನಿಂದ ಹಿರಿಯೂರಿನ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ನೀರಾವರಿ ಹೋರಾಟಗಾರ ದಿಂಡಾವರ ಚಂದ್ರಗಿರಿ ಹೇಳಿದರು.

ತಾಲ್ಲೂಕಿನ ಕಲ್ಲುವಳ್ಳಿ ಭಾಗದ ಯಲ್ಲದಕೆರೆ, ಕಾಟನಾಯಕನಹಳ್ಳಿ, ಚಿಕ್ಕಬ್ಯಾಡರಹಳ್ಳಿ, ದೊಡ್ಡ ಬ್ಯಾಡರಹಳ್ಳಿ, ದಿಂಡಾವರ ಮೊದಲಾದ ಗ್ರಾಮಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸುವ ಬಗ್ಗೆ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಕರಪತ್ರ ಹಂಚಿ ಮಾತನಾಡಿದರು.

‘ಕಲ್ಲುವಳ್ಳಿ ಭಾಗದಲ್ಲಿ ಕೆರೆಗಳು ಒಣಗಿದ್ದು, ಅಂತರ್ಜಲ ಕುಸಿದು 1000 ಅಡಿ ಕೊರೆಸಿದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ಸಾವಿರಾರು ಎಕರೆ ಅಡಿಕೆ, ತೆಂಗಿನ ತೋಟಗಳು ಒಣಗಿ ಹೋಗಿವೆ. ಈ ಭಾಗದ ಜನ ಉದ್ಯೋಗ ಹುಡುಕಿ ಗುಳೇ ಹೋಗುತ್ತಿದ್ದಾರೆ. ನಮ್ಮ ಕೆರೆಗಳು ತುಂಬಿದರೆ ಮಾತ್ರ ನಮ್ಮ ಹಿರಿಯರು ಬದುಕಿ ಬಾಳಿದ ನಮ್ಮೂರುಗಳಲ್ಲಿ ಬದುಕು ನಡೆಸಲು ಸಾಧ್ಯ. ಹೀಗಾಗಿ ನೀರಿಗಾಗಿ ನಿರ್ಣಾಯಕ ಹೋರಾಟ ನಡೆಸೋಣ’ ಎಂದು ಮನವಿ ಮಾಡಿದರು.

‘ಕಲ್ಲುವಳ್ಳಿ ಭಾಗದ ಗಾಯತ್ರಿ ಅಣೆಕಟ್ಟೆ, ಗಾಂಧಿನಗರ, ಗೌಡನಹಳ್ಳಿ, ದಿಂಡಾವರ, ಉಡುವಳ್ಳಿ, ಚಿಕ್ಕಕೆರೆ, ಬಗ್ಗನಡು, ವಡ್ಡನಹಳ್ಳಿ, ಮಾವಿನಮಡು, ಮಾಳಗೊಂಡನಹಳ್ಳಿ ಸೇರಿದಂತೆ ಗ್ರಾಮದ ಕೆರೆಗಳಿಗೆ ನೀರು ತುಂಬಿಸಿದಲ್ಲಿ ಈ ಭಾಗದ ರೈತರು, ಕೃಷಿ ಕಾರ್ಮಿಕರು, ಪಶುಪಾಲಕರ ಬದುಕು ಹಸನಾಗುತ್ತದೆ. ನೀರು ಬರುವವರೆಗೆ ಹೋರಾಟ ನಡೆಸೋಣ’ ಎಂದರು.

‘ದಿವಂಗತ ಡಿ. ಸುಧಾಕರ್ ಸಚಿವರಾಗಿದ್ದ ಸಮಯದಲ್ಲಿ ಕಲ್ಲುವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುಲು ₹ 265 ಕೋಟಿ ವೆಚ್ಚದ ಯೋಜನೆಗೆ ನೀರಾವರಿ ನಿಗಮದ ಅನುಮೋದನೆ ಪಡೆದಿದ್ದರು. 20 ದಿನಗಳ ಒಳಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಈ ಯೋಜನೆಗೆ ಮಂಜೂರಾತಿ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ಉಪಚುನಾವಣೆ ಒಳಗೊಂಡು ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-44-1984278300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.