ಹಿರಿಯೂರು: ನಗರದಲ್ಲಿ ಬರೋಬ್ಬರಿ ನೂರಕ್ಕೂ ಅಧಿಕ ಉದ್ಯಾನಗಳಿವೆ. ಆದರೆ, ಮೂರ್ನಾಲ್ಕು ಉದ್ಯಾನಗಳನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ವಾಯುವಿಹಾರಕ್ಕಲ್ಲದೆ ಅಕ್ಕಪಕ್ಕದ ಮನೆಗಳ ತ್ಯಾಜ್ಯ ಸುರಿಯಲು ಬಳಕೆ ಆಗುತ್ತಿವೆ. ಅವುಗಳಲ್ಲಿ ಕೆಲವು ಉದ್ಯಾನಗಳು ಜಾಲಿ ಗಿಡಗಳ ಪೊದೆ ಬೆಳೆಯುವ ತಾಣಗಳಾಗಿವೆ.

ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಮಕ್ಕಳು ಬಿಸಿಲು ಇದ್ದಾಗ ನಗರದಲ್ಲಿ ಹಾದು ಹೋಗಿರುವ ವಾಣಿ ವಿಲಾಸ ಅಣೆಕಟ್ಟೆಯ ಎರಡು ನಾಲೆಗಳಿಗೆ ಹೋಗಿ ಈಜಿ ದಣಿವು ಆರಿಸಿಕೊಂಡರೆ, ಬೆಳಿಗ್ಗೆ ಮತ್ತು ಸಂಜೆ ಉದ್ಯಾನಗಳಿಗೆ ಹೋಗಿ ಗೆಳೆಯರೊಂದಿಗೆ ಸ್ವಲ್ಪ ಸಮಯ ಆಟ ಆಡಿ ಬರಲು ಬಯಸುತ್ತಾರೆ. ಆದರೆ, ನಗರದಲ್ಲಿ ಮಕ್ಕಳಿಗೆ ಆಟವಾಡಲು, ವಾಯುವಿಹಾರ ಮಾಡುವಂತಹ ಒಂದೇ ಒಂದು ಉದ್ಯಾನ ಕಣ್ಣಿಗೆ ಬೀಳುವುದಿಲ್ಲ ಎನ್ನುತ್ತಾರೆ ಉಪನ್ಯಾಸಕ ಎಂ. ವೇಣುಕುಮಾರ್.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಹಿಂಭಾಗದಲ್ಲಿರುವ ಎಸ್.ಎಸ್. ಬಡಾವಣೆಯ ಉದ್ಯಾನಕ್ಕೆ ಪ್ರತಿನಿತ್ಯ ಹಲವಾರು ಮಕ್ಕಳು ಆಟವಾಡಲು ಬರುತ್ತಾರೆ. ಆದರೆ, ಆ ಉದ್ಯಾನದ ತುಂಬ ಜಾಲಿ ಗಿಡಗಳು ಬೆಳೆದಿದ್ದು, ಉದ್ಯಾನದಲ್ಲಿರುವ ಆಟಿಕೆಗಳು ಕೂಡ ಪೊದೆಗಳ ನಡುವೆ ಕಣ್ಮರೆಯಾಗಿವೆ ಎಂದು ಅವರು ಹೇಳುತ್ತಾರೆ.

ಸಾಯಿ ಬಡಾವಣೆಯಲ್ಲಿ ಉದ್ಯಾನ ಇದೆ. ಅದರ ನಿರ್ವಹಣೆ ಮಾಡುತ್ತೇವೆ. ಗಿಡಗಳಿಗೆ ಬೇಕಾದ ನೀರಿನ ವ್ಯವಸ್ಥೆ ಮಾಡಿ ಎಂದು ಅಲ್ಲಿನ ಕ್ಷೇಮಾಭಿವೃದ್ಧಿ ಸಂಘದವರು ನಗರಸಭೆಗೆ ಮನವಿ ಮಾಡಿ ತಿಂಗಳುಗಳೇ ಕಳೆದಿವೆ. ಸ್ವಚ್ಛಗೊಳಿಸಿದ್ದ ಉದ್ಯಾನದಲ್ಲಿ ಮತ್ತೆ ಮುಳ್ಳುಗಿಡಗಳು ರಾರಾಜಿಸುತ್ತಿದೆ. ಕುವೆಂಪು ಬಡಾವಣೆ, ಸಿಎಂ ಬಡಾವಣೆ, ನೆಹರು ಮೈದಾನದಲ್ಲಿರುವ ಉದ್ಯಾನ ಅನೈತಿಕ ಚಟುವಟಿಕೆಯ ತಾಣವಾಗಿದೆ.

ಹೊಸದಾಗಿ ಬಡಾವಣೆ ನಿರ್ಮಿಸುವವರು ನಗರಸಭೆಯಿಂದ ನಿರಾಕ್ಷೇಪ ಪತ್ರ ಪಡೆಯಲು ಎಷ್ಟು ಬೇಕೋ ಅದಕ್ಕೆ ತಕ್ಕಂತೆ ಉದ್ಯಾನ ನಿರ್ಮಿಸಿ, ನಗರಸಭೆಗೆ ಹಸ್ತಾಂತರಿಸಿ ಕೈ ತೊಳೆದುಕೊಳ್ಳುತ್ತಾರೆ. ಬಡಾವಣೆ ನಿರ್ಮಾತೃಗಳಿಂದ ಸಾಕಷ್ಟು ಶುಲ್ಕ ವಸೂಲಿ ಮಾಡುವ ನಗರಸಭೆ ಆಡಳಿತ ತನ್ನ ಕರ್ತವ್ಯವನ್ನು ಮರೆಯುವ ಕಾರಣ ಉದ್ಯಾನಗಳು ಅದ್ವಾನದ ವನಗಳಾಗಿವೆ ಎಂಬ ಟೀಕೆ ವ್ಯಾಪಕವಾಗಿದೆ.

ಉದ್ಯಾನಗಳು ವಾಯು ವಿಹಾರಿಗಳಿಗೆ, ಪುಟಾಣಿಗಳಿಗೆ ಒಂದಿಷ್ಟು ರಂಜನೆ ನೀಡುವ, ಗಿಡ– ಮರಗಳಿಂದ ಕಂಗೊಳಿಸುತ್ತ ಮ್ಲಜನಕ ಸೃಷ್ಟಿಸಿ ಶುದ್ಧ ಗಾಳಿ ಹರಡುವ ತಾಣಗಳಾಗಬೇಕು. ಆಯಾ ಬಡಾವಣೆಯ ನಿವಾಸಿಗಳ ಸಭೆ ಕರೆದು, ತಂತಿಬೇಲಿ, ನೀರು, ಗಿಡಗಳ ವ್ಯವಸ್ಥೆ ಮಾಡಿ ನಿರ್ವಹಣೆ ಮಾಡುವಂತೆ ಕೇಳಬೇಕು. ಉತ್ತಮವಾಗಿ ನಿರ್ವಹಣೆ ಮಾಡಿದ ಬಡಾವಣೆ ನಿವಾಸಿಗಳಿಗೆ ವಿಶ್ವಪರಿಸರ ದಿನದಂದು ಸನ್ಮಾನಿಸಿ ಪ್ರೋತ್ಸಾಹಿಸಬೇಕು ಎಂದು ಹಿರಿಯರು ಸಲಹೆ ನೀಡುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-44-1350877552

ನಗರದಲ್ಲಿರುವ ಉದ್ಯಾನಗಳ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಿದ್ದೇವೆ. ವಾರಕ್ಕೊಂದು ಉದ್ಯಾನ ಸ್ವಚ್ಛಗೊಳಿಸಲಾಗುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ನೆರವಿನೊಂದಿಗೆ ಉದ್ಯಾನಗಳಲ್ಲಿ ಗಿಡ ನೆಟ್ಟು, ನೀರಿನ ವ್ಯವಸ್ಥೆ ಮಾಡಲಾಗುವುದು

–ಎ. ವಾಸೀಂ, ಪೌರಾಯುಕ್ತ, ಹಿರಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.