ಹೊಳಲ್ಕೆರೆ: ತಾಲ್ಲೂಕಿನ ಅರೇಹಳ್ಳಿ ಸಮೀಪ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಆರಂಭಗೊಂಡ ಕಾಮಗಾರಿಯು ಎರಡು ವರ್ಷ ಕಳೆದರೂ ಕುಂಟುತ್ತಾ ಸಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸೌಲಭ್ಯ ದೊರೆಯುವುದು ಮರೀಚಿಕೆಯಾದಂತಾಗಿದೆ.

ರಾಷ್ಟ್ರೀಯ ಹೆದ್ದಾರಿ- 13ರಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ರೈಲ್ವೆ ಗೇಟ್ ಹಾಕಿದಾಗ ಕಿಲೋ ಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಕೆಲವೊಮ್ಮೆ ರೈಲು ಹೋದ ನಂತರ ಗೇಟ್ ತೆರೆದಾಗ ನಿಂತಿದ್ದ ವಾಹನಗಳು ಖಾಲಿ ಆಗುವುದರ ಒಳಗೆ ಮತ್ತೊಂದು ರೈಲು ಬರುತ್ತದೆ. ಇದರಿಂದ ಕೆಲವು ವಾಹನಗಳು ಅರ್ಧ ಗಂಟೆಯವರೆಗೆ ರಸ್ತೆಯಲ್ಲೇ ನಿಲ್ಲುವ ಸ್ಥಿತಿ ಇದೆ.

ಹಿಂದೆ ಸೊಲ್ಲಾಪುರ- ಚಿತ್ರದುರ್ಗ ನಡುವೆ ಇದ್ದ ಈ ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯನ್ನು ಚಿತ್ರದುರ್ಗದಿಂದ ಶಿವಮೊಗ್ಗ, ತೀರ್ಥಹಳ್ಳಿ, ಕಾರ್ಕಳ ಮಾರ್ಗವಾಗಿ ಮಂಗಳೂರಿನವರೆಗೆ ವಿಸ್ತರಿಸಲಾಯಿತು. ನಂತರ ಚಿತ್ರದುರ್ಗದಿಂದ ಶಿವಮೊಗ್ಗದವರೆಗೆ ಸುಸಜ್ಜಿತ ರಸ್ತೆ ನಿರ್ಮಿಸಲಾಯಿತು. ಆಗ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು.

ಮೂರು ವರ್ಷಗಳ ಹಿಂದೆ ಈ ರಸ್ತೆಯನ್ನು ಮತ್ತಷ್ಟು ವಿಸ್ತರಿಸಿದ್ದು, ಉತ್ತಮ ರಸ್ತೆ ನಿರ್ಮಾಣ ಆಗಿರುವುದರಿಂದ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಬೆಂಗಳೂರಿನಿಂದ ಶಿವಮೊಗ್ಗ, ಉಡುಪಿ, ಮಂಗಳೂರು, ಗೋಕರ್ಣ, ಕಾರವಾರ ಕಡೆಗೆ ಸಂಚರಿಸುವ ವಾಹನಗಳು ಚಿತ್ರದುರ್ಗ, ಶಿವಮೊಗ್ಗ ಮಾರ್ಗವಾಗಿ ಇದೇ ರಸ್ತೆಯಲ್ಲಿ ಸಂಚರಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಸಂಜೆ ಮತ್ತು ರಾತ್ರಿ ವಿಪರೀತ ಟ್ರಾಫಿಕ್ ಆಗುವುದರಿಂದ ರೈಲ್ವೆ ಗೇಟ್ ಹಾಕಿದಾಗ ಹೆಚ್ಚು ಸಮಸ್ಯೆ ಆಗುತ್ತಿದೆ. ಈ ಮಾರ್ಗದಲ್ಲಿ ಜಿಲ್ಲೆಗಿಂತ ಹೊರ ಜಿಲ್ಲೆಗಳ ವಾಹನಗಳ ಓಡಾಟವೇ ಹೆಚ್ಚಾಗಿದೆ.

‘ಇದು ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಮಧ್ಯೆ ಡಿವೈಡರ್ ಹಾಕಿ ಷಟ್ಪಥ ರಸ್ತೆ ನಿರ್ಮಿಸಬೇಕಿತ್ತು. ಹೊಳಲ್ಕೆರೆ ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಿಸಿದರೆ ಟ್ರಾಫಿಕ್ ಸಮಸ್ಯೆ ಕಡಿಮೆ ಆಗಲಿದೆ’ ಎಂದು ರೈತ ಮುಖಂಡ ಕೆ.ಎನ್.ಅಜಯ್ ಹೇಳಿದರು.

‘ನಾನು ಶಿವನಿಯಿಂದ ಹೊಳಲ್ಕೆರೆಗೆ ನಿತ್ಯ ತ್ರಿಚಕ್ರ ವಾಹನದಲ್ಲಿ ಸಂಚರಿಸುತ್ತೇನೆ. ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿಗುಂಡಿಗಳು ಇರುವುದರಿಂದ ನನ್ನ ವಾಹನ ಮಗುಚಿಕೊಳ್ಳುವ ಭಯ ಇದೆ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ’ ಎಂದು ಅಂಗವಿಕಲ ಶಿಕ್ಷಕ ಎಸ್.ಪಿ.ದಯಾನಂದ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-44-2079450914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.