ಹೊಳಲ್ಕೆರೆ: ವಚನಕಾರ ಬಸವಣ್ಣನ ಚಿಂತನೆಗಳು ಸರ್ವಕಾಲಕ್ಕೂ ಸತ್ಯವಾದವು ಎಂದು ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡ ಕೆ.ಎಂ.ಶಿವಕುಮಾರ್ ತಿಳಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವೇಶ್ವರರ ವಚನಗಳಲ್ಲಿ ಕ್ರಾಂತಿಕಾರಿ ಚಿಂತನೆಗಳು ಅಡಗಿದ್ದು, ಸರ್ವಕಾಲಕ್ಕೂ ಶಾಶ್ವತವಾಗಿವೆ. ಎಲ್ಲರನ್ನೂ ಸಮಾನವಾಗಿ ಕಾಣುವ ಹಂಬಲ ಹೊಂದಿದ್ದ ಅವರು ಇವನಾರವ ಇವನಾರವ ಎನ್ನದೆ ‘ಇವ ನಮ್ಮವ’ ಎನ್ನುವ ಸಂದೇಶವನ್ನು ಮನಕುಲಕ್ಕೆ ನೀಡಿದ ಮಹಾನ್ ಮಾನವತಾವಾದಿ’ ಎಂದು ಬಣ್ಣಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಆರ್.ಗಿರೀಶ್ ಮಾತನಾಡಿದರು. ವೀರೇಶ್ ಕುಮಾರ್ ಬಸವಣ್ಣನ ಜೀವನ, ವಚನಗಳ ಕುರಿತು ಉಪನ್ಯಾಸ ನೀಡಿದರು.

ತಹಶೀಲ್ದಾರ್ ವಿಜಯ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಉಮೇಶ್, ಗುತ್ತಿಗೆದಾರ ಎಸ್.ಮಾರುತೇಶ್, ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವ ರಾಜಯ್ಯ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಕೋಶಾಧ್ಯಕ್ಷ ಬಸವರಾಜ್, ಮುಖಂಡ ರಾದ ಉಮೇಶ್, ಮಹೇಶ್ವರಪ್ಪ, ವಕೀಲ ಚಂದ್ರಶೇಖರ್, ಎಸ್.ವೇದಮೂರ್ತಿ, ರುದ್ರಸ್ವಾಮಿ, ಪುರಸಭೆ ಮಾಜಿ ಉಪಾಧ್ಯಕ್ಷ ಕೆ.ಆರ್. ರಾಜಪ್ಪ, ಟಿಎಪಿಸಿಎಂಎಸ್ ಸದಸ್ಯ ಈಶ್ವರಪ್ಪ, ಕಲ್ಲವ್ವನಾಗತಿಹಳ್ಳಿ ಸುರೇಶ್, ಕುಡಿನೀರುಕಟ್ಟೆ ವೀರಭದ್ರಪ್ಪ, ಲೋಕೇಶ್, ಸುಧಾ ಮಾರುತೇಶ್, ರುದ್ರೇಶ್, ಹರೀಶ್, ಮಲ್ಲಿಕಾರ್ಜುನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-44-767380023

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.