ಹೊಳಲ್ಕೆರೆ: ‘₹ 75 ಲಕ್ಷ ವೆಚ್ಚದಲ್ಲಿ ಈದ್ಗಾ ಪ್ರದೇಶ ಅಭಿವೃದ್ಧಿ ಮಾಡಲಾಗುವುದು’ ಎಂದು ಶಾಸಕ ಎಂ. ಚಂದ್ರಪ್ಪ ಭರವಸೆ ನೀಡಿದರು.

ಪಟ್ಟಣದ ದಾವಣಗೆರೆ ರಸ್ತೆಯ ಈದ್ಗಾ ಮೈದಾನದಲ್ಲಿ ಗುರುವಾರ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘2008ರಲ್ಲಿ ನಾನು ಇಲ್ಲಿಗೆ ಮೊದಲ ಬಾರಿ ಶಾಸಕನಾಗಿ ಬಂದಾಗ ಮುಸ್ಲಿಮರು ಹಬ್ಬಗಳಲ್ಲಿ ಪ್ರಾರ್ಥನೆ ಮಾಡುವ ಈದ್ಗಾ ಮೈದಾನ ಮುಳ್ಳಿನ ಗಿಡಗಳಿಂದ ತುಂಬಿತ್ತು. ಗಿಡ, ಗಂಟಿಗಳಲ್ಲಿ ನಡೆದುಕೊಂಡು ಹೋಗಿ ಕಿರಿದಾದ ಜಾಗದಲ್ಲಿ ಪ್ರಾರ್ಥನೆ ಮಾಡುವ ಪರಿಸ್ಥಿತಿ ಇತ್ತು. ಆಗ ನಾನು ಇಲ್ಲಿ ಕೊಳವೆ ಬಾವಿ ಕೊರೆಸಿ ಉದ್ಯಾನ ನಿರ್ಮಿಸಿ ರಸ್ತೆಯನ್ನೂ ನಿರ್ಮಿಸಿಕೊಟ್ಟೆ. ಈಗ ₹ 75 ಲಕ್ಷ ಅನುದಾನ ನೀಡಿದ್ದು, ತಡೆಗೋಡೆ ನಿರ್ಮಾಣ, ರಸ್ತೆ, ಉದ್ಯಾನ ಅಭಿವೃದ್ಧಿ ಮಾಡಲಾಗುವುದು. ರಾಜ್ಯ ಸರ್ಕಾರದ ಅನುದಾನದಲ್ಲಿ ಶಾದಿ ಮಹಲ್ಗೆ ಹಣ ನೀಡಲು ಅವಕಾಶ ಇಲ್ಲ. ಆದರೂ ನಾನು ನನ್ನದೇ ತಂತ್ರ ಬಳಸಿ ₹ 4 ಕೋಟಿ ವೆಚ್ಚದಲ್ಲಿ ಹವಾನಿಯಂತ್ರಿತ ಶಾದಿ ಮಹಲ್ ಕಟ್ಟಿಸುತ್ತಿದ್ದು, ಕಾಮಗಾರಿ ಮುಗಿಯುವ ಹಂತದಲ್ಲಿದೆ’ ಎಂದು ತಿಳಿಸಿದರು.

‘ಹುಟ್ಟು–ಸಾವಿನ ನಡುವೆ ನಾವು ನಡೆಸುವ ಜೀವನ ಅತ್ಯಂತ ಅಮೂಲ್ಯವಾದುದು. ಮನುಷ್ಯತ್ವವಿರುವ ಎಲ್ಲರೂ ಅವಕಾಶ ಸಿಕ್ಕಾಗ ಹತ್ತಾರು ಜನ ಮೆಚ್ಚುವ ರೀತಿ ಕೆಲಸ ಮಾಡಬೇಕು. ಅದೇ ನಿಜವಾದ ಮಾನವ ಧರ್ಮ. ನಾನು ಐದು ಬಾರಿ ಶಾಸಕನಾಗಿ ಜನ ಮೆಚ್ಚುವಂತೆ ಕೆಲಸ ಮಾಡಿದ ತೃಪ್ತಿ ಇದೆ. ದುಡಿದವರಿಗೆ ನ್ಯಾಯ ಕೊಡಬೇಕು ಎಂಬುದು ಅಲ್ಲಾನಿಗೂ ಗೊತ್ತಿದೆ.

‘ನನಗೆ ಮತ ಹಾಕಲಿ ಬಿಡಲಿ ಎಲ್ಲಾ ಜಾತಿ, ಧರ್ಮದವರನ್ನೂ ಸಮಾನವಾಗಿ ಕಾಣುತ್ತೇನೆ. ಧರ್ಮ, ಕರ್ಮ ಅವರವರ ಪಾಲಿಗೆ ಬಿಟ್ಟಿದ್ದು’ ಎಂದರು.

ಪುರಸಭೆ ಮಾಜಿ ಸದಸ್ಯರಾದ ಆರ್.ಎ. ಅಶೋಕ್, ಪಿ.ಎಚ್. ಮುರುಗೇಶ್, ಮಲ್ಲಿಕಾರ್ಜುನಸ್ವಾಮಿ, ಸಜಿಲ್, ಮುಸ್ಲಿಂ ಮುಖಂಡರಾದ ಮುತ್ತುವಲಿ ಸಾಬ್, ಅಲಿಂಸಾಬ್, ಸೈಯದ್ ಸಾಬ್, ಭಕ್ಷಿ ಸಾಬ್, ಜಾಕಿರ್ ಈ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-44-574312594

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.