ಹೊಳಲ್ಕೆರೆ: ಇನ್ನು ಮುಂದೆ ಪುರಸಭೆಯಿಂದಲೇ ಪ್ರತೀ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಪಟ್ಟಣ ಹಾಗೂ ಸಮೀಪದ ಚೀರನಹಳ್ಳಿಯಲ್ಲಿ ₹30 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ₹40 ಲಕ್ಷ ವೆಚ್ಚದಲ್ಲಿ ಖರೀದಿಸಿರುವ ಶುದ್ಧ ಕುಡಿಯುವ ನೀರು ವಿತರಿಸುವ ಎರಡು ಟ್ಯಾಂಕರ್ ವಾಹನಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಜನರು ನೀರಿಗಾಗಿ ಓಡಾಡುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ತಲಾ 6,000 ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕರ್ ವಾಹನ ಖರೀದಿಸಿದ್ದು, ಪ್ರತೀ ಬಡಾವಣೆಗೆ ವಿತರಿಸಲಾಗುವುದು. ವಾಹನ ನಿರ್ವಹಣೆ ಉದ್ದೇಶದಿಂದ 20 ಲೀಟರ್ ನೀರಿಗೆ ₹5 ನಿಗದಿ ಮಾಡಿದ್ದು, ನಾಣ್ಯ ಹಾಕಿ ನೀರು ಪಡೆಯಬಹುದು. ಪಟ್ಟಣ ಸೇರಿದಂತೆ ಪುರಸಭೆ ವ್ಯಾಪ್ತಿಯ ಹಳ್ಳಿಗಳಿಗೂ ವಾಹನ ಬರಲಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಉಮೇಶ್, ಪುರಸಭೆ ಮಾಜಿ ಅಧ್ಯಕ್ಷ ಆರ್.ಎ.ಅಶೋಕ್, ಮಾಜಿ ಸದಸ್ಯರಾದ ಪಿ.ಎಚ್.ಮುರುಗೇಶ್, ಮಲ್ಲಿಕಾರ್ಜುನ ಸ್ವಾಮಿ, ಗೀತಾ ಕೃಷ್ಣಮೂರ್ತಿ, ಬಸವರಾಜ ಯಾದವ್, ರಾಜಣ್ಣ, ಡಿ.ಸಿ.ಮೋಹನ್, ಮರುಳಸಿದ್ದಪ್ಪ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.