ಹೊಳಲ್ಕೆರೆ: ಪಟ್ಟಣದ ಐತಿಹಾಸಿಕ ಹಿರೇಕೆರೆಯಲ್ಲಿ ನೀರು ಖಾಲಿಯಾಗುತ್ತಿದ್ದು, ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ.

ಶಿವನಕೆರೆ, ಹೊನ್ನೆಕೆರೆ ಹಾಗೂ ಹಿರೇಕೆರೆ ಸೇರಿದಂತೆ ಮೂರು ಕೆರೆಗಳಿಂದ ಹೊಳಲ್ಕೆರೆ ಎಂಬ ಹೆಸರು ಬಂದಿದೆ. ಇದರಲ್ಲಿ ದಾವಣಗೆರೆ ರಸ್ತೆಯಲ್ಲಿರುವ ಹಿರೇಕೆರೆ ದೊಡ್ಡದಾಗಿದೆ.

ಪಟ್ಟಣದ ಸಮೀಪದಲ್ಲೇ ಇರುವ ಕುಡಿನೀರಕಟ್ಟೆ ಕೆರೆ ತುಂಬಿ ಕೋಡಿಬಿದ್ದ ನಂತರ ಹೊನ್ನೆಕೆರೆಗೆ ನೀರು ಹರಿಯುತ್ತದೆ. ಹೊನ್ನೆಕೆರೆ ತುಂಬಿ ಕೋಡಿ ಬಿದ್ದರೆ ಹಿರೇಕೆರೆಗೆ ನೀರು ಹರಿಯುತ್ತದೆ. ಆದ್ದರಿಂದ ಈ ಕೆರೆಗೆ ನೀರು ಬರಬೇಕೆಂದರೆ ಹಿಂದಿನ ಎರಡು ಕೆರೆಗಳು ತುಂಬಲೇ ಬೇಕು. ಹೆಚ್ಚು ಮಳೆ ಬಂದರೆ ಮಾತ್ರ ಹಿಂದಿನ ಎರಡು ಕೆರೆಗಳು ತುಂಬಿ ಹಿರೇಕೆರೆಗೆ ನೀರು ಬರುತ್ತದೆ. ಆದರೆ, ಕಳೆದ ವರ್ಷ ಮಳೆ ಕಡಿಮೆ ಬಂದಿದ್ದರಿಂದ ಹಿರೇಕೆರೆಗೆ ಹೆಚ್ಚು ನೀರು ಬರಲಿಲ್ಲ. ಅಕ್ಟೋಬರ್ ತಿಂಗಳಿನಲ್ಲಿ ಕುಡಿನೀರಕಟ್ಟೆ ಕೆರೆ, ಹೊನ್ನೆಕೆರೆ ತುಂಬಿದರೂ, ಹಿರೇಕೆರೆಗೆ ನೀರು ಬರುವಷ್ಟರಲ್ಲಿ ಮಳೆಗಾಲವೇ ಮುಗಿದು ಹೋಗಿತ್ತು.

ಹಿರೇಕೆರೆ ಅಂದಾಜು 3,000 ಎಕರೆ ವಿಸ್ತೀರ್ಣ ಹೊಂದಿದ್ದು, ಕೆರೆಯ ಹಿನ್ನೀರು ಪ್ರದೇಶ ಗಣಪತಿ ದೇವಸ್ಥಾನ, ಮುಷ್ಟುಗರ ಬೀದಿ, ಚೀರನಹಳ್ಳಿ ಪ್ರದೇಶದವರೆಗೆ ಹಬ್ಬಿದೆ. ಗಣಪತಿ ದೇವಸ್ಥಾನದಿಂದ ಚೀರನಹಳ್ಳಿ ಮಾರ್ಗದಲ್ಲಿ ಕೆರೆಯ ನೀರು ಖಾಲಿಯಾಗಿದ್ದು, ರೈತರು, ಜಾನುವಾರುಗಳಿಗೆ ತೊಂದರೆ ಆಗಿದೆ.

‘ಇದು ದೊಡ್ಡ ಕೆರೆ ಆಗಿರುವುದರಿಂದ ಅಚ್ಚುಕಟ್ಟು ಪ್ರದೇಶದ ಅಂದಾಜು 200 ಎಕರೆ ಅಡಿಕೆ ತೋಟಗಳಿಗೆ ಇದೇ ನೀರು ಆಸರೆಯಾಗಿದೆ. ಕೆರೆ ತುಂಬಿದರೆ ಮಲ್ಕಾಪುರ, ಅಗ್ರಹಾರ, ಕುನುಗಲಿ, ಹುಲೇಮಳಲಿ, ಗುಂಡಿಮಡು, ಗೊಲ್ಲರಹಟ್ಟಿ, ಭೋವಿಹಟ್ಟಿ, ಶಿವಪುರ, ಮಲ್ಲಾಡಿಹಳ್ಳಿ, ಕೆಂಗುಂಟೆ, ರಾಮಘಟ್ಟದವರೆಗೆ 10 ಕಿಲೋಮೀಟರ್ ದೂರದವರೆಗೆ ಅಂತರ್ಜಲ ಹೆಚ್ಚುತ್ತದೆ. ಆದರೆ, ಈ ಬಾರಿ ಕೆರೆಯ ನೀರು ಖಾಲಿ ಆಗುತ್ತಿರುವುದರಿಂದ ಏರಿ ಕೆಳಗಿನ ಕೊಳವೆ ಬಾವಿಗಳನ್ನು ಬಿಟ್ಟರೆ ಉಳಿದ ಕಡೆ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿದೆ’ ಎನ್ನುತ್ತಾರೆ ಕೆರೆ ಅಚ್ಚುಕಟ್ಟು ಸಮಿತಿಯ ಅಧ್ಯಕ್ಷ ಇಂದುಧರ ಮೂರ್ತಿ.

ಕೆರೆ ಏರಿ ವಿಸ್ತರಣೆ ಅಗತ್ಯ: ಹಿರೇಕೆರೆಯ ಏರಿಯ ಮೇಲೆ ದಾವಣಗೆರೆ ಮುಖ್ಯರಸ್ತೆ ಇರುವುದರಿಂದ ರಸ್ತೆಯನ್ನು ಮತ್ತಷ್ಟು ವಿಸ್ತರಿಸುವುದು ಅಗತ್ಯ ಎಂದು ಪಟ್ಟಣದ ನಾಗರಿಕರ ಆಗ್ರಹವಾಗಿದೆ.

ಪಟ್ಟಣಕ್ಕೆ ಹೊಂದಿಕೊಂಡಿರುವ ಈ ಕೆರೆ ತುಂಬಿದಾಗ ಜನರನ್ನು ಆಕರ್ಷಿಸುತ್ತದೆ. ಏರಿಯ ಮೇಲೆ ಈಗ ಡಬಲ್ ರಸ್ತೆ ಇದ್ದು, ಅದನ್ನು ಚತುಷ್ಪಥವನ್ನಾಗಿ ವಿಸ್ತರಿಸಬೇಕು. ರಸ್ತೆಯ ಎರಡೂ ಕಡೆ ಪಾದಚಾರಿ ಮಾರ್ಗ, ತಡೆ ಬೇಲಿ ನಿರ್ಮಿಸಬೇಕು. ಕೆರೆ ಏರಿ ಮೇಲೆ ಹೂವಿನ ಗಿಡಗಳನ್ನು ಬೆಳೆಸಿ ವಾಯು ವಿಹಾರಿಗಳಿಗೆ ಅನುಕೂಲ ಮಾಡಿಕೊಡಬೇಕು. ಶಾಸಕ ಎಂ. ಚಂದ್ರಪ್ಪ ಹೊಸದುರ್ಗ ರಸ್ತೆಯ ಚಿಕ್ಕಕೆರೆ ಏರಿಯನ್ನು ವಿಸ್ತರಿಸಿ ಡಿವೈಡರ್ ಅಳವಡಿಸಿ, ವಿದ್ಯುತ್ ದೀಪ ಅಳವಡಿಸಿರುವಂತೆ ಈ ಕೆರೆ ಏರಿಯನ್ನೂ ಅಭಿವೃದ್ಧಿ ಮಾಡಬೇಕು ಎಂಬುದು ಹಿರಿಯ ನಾಗರಿಕರ ಒತ್ತಾಯವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-44-2140068367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.