ಗುರುವಾರ , ಅಕ್ಟೋಬರ್ 29, 2020
21 °C

ಮನೆ ಕುಸಿತ, ಸಿಡಿಲಿಗೆ ಕುರಿಗಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ಶುಕ್ರವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಕುರುಡಿಹಳ್ಳಿ ಗ್ರಾಮದ ಬೊಮ್ಮಕ್ಕ, ಬಾಲೇನಹಳ್ಳಿ ಹನುಮಂತಪ್ಪ, ಬುಡ್ನಹಟ್ಟಿ ಕಮಲಮ್ಮರವರ ಮನೆಗಳು ಭಾಗಶಃ ಕುಸಿದಿವೆ.

ಇದರಿಂದ ₹ 70 ಸಾವಿರ ಮತ್ತು ರಾಮಜೋಗಿಹಳ್ಳಿ ಗ್ರಾಮದ ಬಿ. ನಾಗೇಂದ್ರಪ್ಪ ಚೌಧರಿ ಹಾಗೂ ಡಿ.ಐಯ್ಯಣ್ಣ ರವರ ಜಮೀನಿಗೆ ಮಳೆ ನೀರು ನುಗ್ಗಿ ₹ 20 ಸಾವಿರ ಸೇರಿ ತಾಲ್ಲೂಕಿನಲ್ಲಿ ಒಟ್ಟು ₹ 90 ಸಾವಿರ ನಷ್ಟವಾಗಿದೆ ಎಂದು ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ತಿಳಿಸಿದ್ದಾರೆ.

ನಾಯಕನಹಟ್ಟಿ–1 ಸೆಂ.ಮೀ, ದೇವರಮರಿಕುಂಟೆ–3.3 ಸೆಂ.ಮೀ, ಚಳ್ಳಕೆರೆ ಕಸಬಾ– 1.3 ಸೆಂ.ಮೀ, ಪರಶುರಾಂಪುರ– 1.4 ಹಾಗೂ ತಳಕು– 1.2 ಸೆಂ.ಮೀ ಸೇರಿ ತಾಲ್ಲೂಕಿನಲ್ಲಿ ಒಟ್ಟು 8.5 ಸೆಂ.ಮೀ. ಮಳೆಯಾಗಿದೆ.

ಸಿಡಿಲು ಬಡಿದು ನಾಲ್ಕು ಕುರಿಗಳು ಸಾವು: ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ವರವಿನವರಹಟ್ಟಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ನಾಲ್ಕು ಕುರಿಗಳು ಸಾವನ್ನಪ್ಪಿವೆ.

ಹುಲೆಪಾಪಯ್ಯ ಅವರಿಗೆ ಸೇರಿದ ಕುರಿಗಳು ಮನೆಯ ಮುಂದಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಇದರಿಂದ ₹ 35 ಸಾವಿರ ನಷ್ಟವಾಗಿದೆ ಎಂದು ಹುಲೆಪಾಪಯ್ಯ
ತಿಳಿಸಿದ್ದಾರೆ.

ಕೊಟ್ಟಿಗೆ ಬಳಿ ಇದ್ದ ಇಬ್ಬರು ಯುವಕರು ಪಾರಾಗಿದ್ದಾರೆ. ಪ್ರಕರಣ ದಾಖಲಾಗಿದೆ ಎಂದು ಪಿಎಸ್‍ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.