ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಣೇಹಳ್ಳಿ: ನ.4 ರಿಂದ ರಾಷ್ಟ್ರೀಯ ನಾಟಕೋತ್ಸವ

Published : 26 ಸೆಪ್ಟೆಂಬರ್ 2024, 15:31 IST
Last Updated : 26 ಸೆಪ್ಟೆಂಬರ್ 2024, 15:31 IST
ಫಾಲೋ ಮಾಡಿ
Comments

ಹೊಸದುರ್ಗ: ನವೆಂಬರ್ 4 ರಿಂದ 9 ರವರೆಗೆ ರಾಷ್ಟ್ರೀಯ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶಿವಕುಮಾರ ಬಯಲು ರಂಗಮಂದಿರದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನವಿರುತ್ತದೆ. ಎಸ್‌ಎಸ್ ಒಳಾಂಗಣ ರಂಗಮಂದಿರದಲ್ಲಿ ಮಧ್ಯಾಹ್ನದ ನಾಟಕ ಪ್ರದರ್ಶನ ಹಾಗೂ ಮುಖ್ಯ ವಿಚಾರ ಸಂಕಿರಣ ನಡೆಯಲಿವೆ ಎಂದರು. 

ಶಿವಕುಮಾರ ರಂಗಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆ ಕಾರ್ಯಕ್ರಮ ಜರುಗಲಿವೆ. ನಾಟಕೋತ್ಸವದಲ್ಲಿ ಶಿವಸಂಚಾರದ 3 ನಾಟಕಗಳು ಮತ್ತು ಇತರ ಭಾಷೆಯ ನಾಟಕಗಳೂ ಪ್ರದರ್ಶನಗೊಳ್ಳಿವೆ. ಪ್ರತಿದಿನದ ವಿಚಾರ ಮಾಲಿಕೆ, ವಚನ ಸಂಗೀತ, ನೃತ್ಯರೂಪಕ, ಸಾಧಕರಿಗೆ ಅಭಿನಂದನೆ, ರಾಜಕೀಯ ನೇತಾರರ, ಚಿಂತಕರ ಮಾತುಗಳು, ಸ್ವಾಮೀಜಿ ಆಶೀರ್ವಚನ, ಶಿವಕುಮಾರ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳು ಈ ವರ್ಷವೂ ನಡೆಯಲಿವೆ ಎಂದರು.

ಸಾಧುಸದ್ಧರ್ಮ ವೀರಶೈವ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಸಿದ್ದಪ್ಪ, ಮುಖಂಡರಾದ ಎಸ್.ಕೆ. ಪರಮೇಶ್ವರಯ್ಯ, ಎ.ಸಿ ಚಂದ್ರಣ್ಣ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಕಾಟೇಹಳ್ಳಿ ಶಿವಕುಮಾರ್, ಬನ್ಸಿಹಳ್ಳಿ ಅಜ್ಜಪ್ಪ, ಬಿ.ಪಿ ಓಂಕಾರಪ್ಪ, ಕೆ.ಬಸವರಾಜ್, ತಿಮ್ಮಜ್ಜ, ಸಿದ್ದಯ್ಯ, ಕೃಷ್ಣಮೂರ್ತಿ, ಸಾ‌.ನಿ ರವಿಕುಮಾರ, ಎಸ್.ಆರ್. ಮಂಜುನಾಥ್, ವೀರಭದ್ರಪ್ಪ, ಸ್ವಾಮಿ, ಪ್ರಭುದೇವ, ಷಣ್ಮುಖಯ್ಯ, ಸಾಣೇಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು, ಕಲಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹೊಸದುರ್ಗದ ಸಾಣೇಹಳ್ಳಿಯಲ್ಲಿ ನಡೆಯಲಿರುವ ನಾಟಕೋತ್ಸವ ಕಾರ್ಯಕ್ರಮಕ್ಕೆ ಅಜ್ಜಂಪುರದ ಎ.ಸಿ ಚಂದ್ರಪ್ಪ ಅವರು 18 ಕ್ವಿಂಟಲ್ ಈರುಳ್ಳಿ ನೀಡಿದರು
ಹೊಸದುರ್ಗದ ಸಾಣೇಹಳ್ಳಿಯಲ್ಲಿ ನಡೆಯಲಿರುವ ನಾಟಕೋತ್ಸವ ಕಾರ್ಯಕ್ರಮಕ್ಕೆ ಅಜ್ಜಂಪುರದ ಎ.ಸಿ ಚಂದ್ರಪ್ಪ ಅವರು 18 ಕ್ವಿಂಟಲ್ ಈರುಳ್ಳಿ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT