ಹೊಸದುರ್ಗ: ಪಟ್ಟಣದ ಸದ್ಗುರು ಸೇವಾಶ್ರಮದಲ್ಲಿ ಶ್ರೀಕಾಂತಾನಂದ ಸ್ವಾಮೀಜಿ 26ನೇ ವರ್ಷದ ಬ್ರಹ್ಮೋಪದೇಶದ ಅಂಗವಾಗಿ ಗುರುವಾರ ಬೆಳಿಗ್ಗೆ 108 ದಂಪತಿಗಳಿಂದ ಅನಘದತ್ತ ವ್ರತ ಧಾರ್ಮಿಕ ವಿಧಿಗಳನ್ವಯ ವಿಜೃಂಭಣೆಯಿಂದ ನಡೆಯಿತು.

ಪೂರ್ಣಕುಂಭ ಸ್ವಾಗತ ಹಾಗೂ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು. 108 ದಂಪತಿಗಳಿಂದ ಅನಘದತ್ತ ವ್ರತ ನಡೆಯಿತು. ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗಾಗಿ ಈ ಪೂಜಾ ಕೈಂಕರ್ಯದಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಭಾಗಿಯಾಗಿದ್ದರು. ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಅನಘದತ್ತ ವ್ರತ ಆಚರಣೆ ನೆರವೇರಿಸಲಾಯಿತು.

ಗುರುವಂದನಾ ಕಾರ್ಯಕ್ರಮ ಹಾಗೂ ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು. ಶ್ರೀಗಳ ಹೆಸರಲ್ಲಿ ಜಯಘೋಷಗಳು ಮೊಳಗಿದವು, ಭಕ್ತರು ಪಲ್ಲಕ್ಕಿ ಹೊರುವ ಮೂಲಕ ಭಕ್ತಿ ಸಮರ್ಪಿಸಿದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-44-1313142576

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.