ಹೊಸದುರ್ಗ: ತಾಲ್ಲೂಕಿನ ಆನಿವಾಳ ಗ್ರಾಮದಲ್ಲಿ ಮಂಗಳವಾರ ವೀರಭದ್ರೇಶ್ವರ ಸ್ವಾಮಿ ಕೆಂಡದಾರ್ಚನೆ ನೂರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ, ಧಾರ್ಮಿಕ ವಿಧಿಗಳನ್ವಯ ನಡೆಯಿತು.

ಮಹಾರುದ್ರಸ್ವಾಮಿ ನೂತನ ದೇವಾಲಯದ ಮೂರನೇ ವಾರ್ಷಿಕ ಮಹೋತ್ಸವ ಹಾಗೂ ಕೆಂಡದಾರ್ಚನೆ ಅಂಗವಾಗಿ ಸೋಮವಾರ ಬೆಳಿಗ್ಗೆ ಗ್ರಾಮಸ್ಥರೆಲ್ಲಾ ಸಿಹಿ ತಿನಿಸುಗಳನ್ನು ತಯಾರಿಸಿ, ಹಬ್ಬ ಆಚರಿಸಿದರು. ಬೆಳಿಗ್ಗೆ 6 ಗಂಟೆಗೆ ಸ್ವಾಮಿಗೆ ರುದ್ರಾಭಿಷೇಕ ಮತ್ತು ಮಹಾಮಂಗಳಾರತಿ ನಡೆಯಿತು. ಅಂದು ಸಂಜೆ 6.30 ಕ್ಕೆ ವೀರಭದ್ರೇಶ್ವರ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಹೂವಿನ ಉತ್ಸವ ರಾಜಬೀದಿಯಲ್ಲಿ ನಡೆಯಲಿದೆ. ಉತ್ಸವದ ವೇಳೆ ನಡೆದ ವೀರಗಾಸೆ ನೋಡುಗರ ಕಣ್ಮನ ಸೆಳೆಯುವಂತಿತ್ತು. ಅವರ ನೃತ್ಯ ಪ್ರದರ್ಶನ ನೋಡುಗರ ಮನಸೂರೆಗೊಂಡಿತು.

ವಿಶೇಷ ಹೂವಿನ ಅಲಂಕಾರ: ಈ ವರ್ಷ ದೇವರುಗಳಿಗೆ ವಿಶೇಷ ಹೂವುಗಳಿಂದ ವಿನೂತನ ರೀತಿಯಲ್ಲಿ ಅಲಂಕರ ಮಾಡಲಾಗಿತ್ತು. ಗುಲಾಬಿ, ತುಳಸಿ, ಕಮಲ, ಸೇವಂತಿಗೆ ಹೂಗಳಿಂದ ತಯಾರಿಸಿದ್ದ ಬೃಹತ್ ಹಾರಗಳು ಶೋಭೆ ತರುವಂತಿದ್ದವು.

ಕೆಂಡದಾರ್ಚನೆ ಅಂಗವಾಗಿ ಮಂಗಳವಾರ ಬೆಳಿಗ್ಗೆ 5 ಕ್ಕೆ ವೀರಭದ್ರೇಶ್ವರ ಸ್ವಾಮಿ, ಮಹಾರುದ್ರಸ್ವಾಮಿ, ಗುರು ಕಲ್ಲೇಶ್ವರ ಸ್ವಾಮಿಯ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಲಾಯಿತು. ನಂತರ ನಡೆಮುಡಿ ಉತ್ಸವದೊಂದಿಗೆ ಕೆಂಡದಾರ್ಚನೆ ನಡೆಯುವ ಸ್ಥಳದ ಬಳಿ ದೇವರನ್ನು ಕರೆತರಲಾಯಿತು. ಬೆಳಿಗ್ಗೆ 8.30 ರ ಸುಮಾರಿಗೆ ವೀರಭದ್ರೇಶ್ವರ ಸ್ವಾಮಿ ಸಮ್ಮುಖದಲ್ಲಿ ಹರಕೆ ಹೊತ್ತ ಮಹಿಳೆಯರು ಹಾಗೂ ಪುರುಷರು ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದರು.

ಆನಿವಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ, ದೇವರ ದರ್ಶನ ಪಡೆದು, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-44-1855556669

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.