ಹೊಸದುರ್ಗ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ರಾಗಿ ಖರೀದಿ ಮಾಡುತ್ತಿದ್ದು, ಪಟ್ಟಣದ ಎಪಿಎಂಸಿ ಆವರಣದಲ್ಲಿ ಮೂಲ ಸೌಲಭ್ಯಗಳಿಲ್ಲದ ಕಾರಣ ರಾಗಿ ತಂದ ರೈತರು ಪರದಾಡುವಂತಾಗಿದೆ. ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಕೃಷಿಕರು ಬಿಸಿಲಿನಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಹುಬೇಗ ರಾಗಿ ಖರೀದಿ ಆಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಎಪಿಎಂಸಿ ಆವರಣದಲ್ಲೇ ದಿನ ದೂಡುತ್ತಿದ್ದಾರೆ. ಶುಕ್ರವಾರ ಅಂದಾಜು 130 ರಿಂದ 150 ಟ್ರ್ಯಾಕ್ಟರ್ ಲೋಡ್ ನಿಂತಿದ್ದು, ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ತಾಲ್ಲೂಕಿನಾದ್ಯಂತ 10,418 ರೈತರು ನೋಂದಣಿಯಾಗಿದ್ದು, 2,62,615 ಕ್ವಿಂಟಲ್ ರಾಗಿ ಖರೀದಿ ನಡೆಯಲಿದೆ. ಮಾರ್ಚ್ 12ರಿಂದ ರಾಗಿ ಖರೀದಿ ಆರಂಭವಾಗಿದೆ. ಎಪಿಎಂಸಿ ಆವರಣ, ಟಿಎಪಿಸಿಎಂಎಸ್ ಗೋಡೌನ್ ಮತ್ತು ಶ್ರೀರಾಂಪುರದಲ್ಲಿ ರಾಗಿ ಖರೀದಿ ನಡೆಯುತ್ತಿದೆ. ಇದುವರೆಗೂ ಮೂರು ಖರೀದಿ ಕೇಂದ್ರಗಳಿಂದ ಒಟ್ಟು 64,992 ಕ್ವಿಂಟಲ್ ರಾಗಿ ಖರೀದಿಯಾಗಿದೆ.

ಎಪಿಎಂಸಿ ಆವರಣದಲ್ಲಿ ನಿತ್ಯ 100ರಿಂದ 150 ಟ್ರ್ಯಾಕ್ಟರ್ ರಾಗಿ ಬರುತ್ತಿದೆ. ನೋಂದಣಿ ಪ್ರಕಾರ ಖರೀದಿ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಹಲವು ರೈತರು ಒಟ್ಟಾಗಿ ರಾಗಿ ತರುತ್ತಿರುವ ಕಾರಣ ನೂಕುನುಗ್ಗಲು ಉಂಟಾಗುತ್ತಿದೆ. ಟ್ರ್ಯಾಕ್ಟರ್ನಲ್ಲಿ ರಾಗಿ ತಂದು ಇಲ್ಲಿಯೇ ಬಿಟ್ಟು ಹೋಗುತ್ತಿರುವ ಕಾರಣ ಹಗ್ಗ, ಟಾರ್ಪಾಲ್ ಕಳ್ಳತನವಾಗುತ್ತಿದ್ದು, ಯಾವುದೇ ಭದ್ರತೆ ಇಲ್ಲದಂತಾಗಿದೆ.

‘ಊಟ, ನೀರು, ವಿದ್ಯುತ್, ಶೌಚಾಲಯ ಸೇರಿ ಯಾವುದೇ ಮೂಲ ಸೌಕರ್ಯಗಳೂ ಇಲ್ಲ. ಶೆಡ್ ನಾಮಮಾತ್ರಕ್ಕೆ ಇದೆ. ಅಲ್ಲಿ ಕಸದ ರಾಶಿ ಹಾಕಲಾಗಿದ್ದು, ಸೊಳ್ಳೆಗಳ ಆವಾಸ ತಾಣವಾಗಿದೆ. ₹25 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿ ಒಂದು ವರ್ಷವಾದರೂ ಇನ್ನೂ ಉದ್ಘಾಟನೆಯಾಗಿಲ್ಲ. ರೈತ ಭವನವನ್ನೂ ನಿರ್ಮಿಸಲಾಗಿದ್ದು, ಅದರ ಉದ್ದೇಶವೂ ಈಡೇರಿಲ್ಲ’ ಎಂದು ಹೇರೂರಿನ ಬಸವರಾಜ್ ಬೇಸರ ವ್ಯಕ್ತಪಡಿಸಿದರು.

‘ತಂದೆ ಇಲ್ಲದ ಕಾರಣ ಮನೆ ಜವಾಬ್ದಾರಿ ಹೆಗಲೇರಿದೆ. 4 ದಿನಗಳಿಂದ ಕಾಲೇಜಿಗೆ ಹೋಗದೆ ಎಪಿಎಂಸಿ ಆವರಣದಲ್ಲೇ ಇದ್ದೇನೆ. ರಾಗಿ ಹೊತ್ತು ಬರುವ ಟ್ರ್ಯಾಕ್ಟರ್ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮೊದಲು ಬಂದವರಿಗೆ ಆದ್ಯತೆ ನೀಡುತ್ತಿರುವ ಕಾರಣ ಒಮ್ಮೊಮ್ಮೆ ರೈತರ ನಡುವೆಯೂ ಜಗಳ ನಡೆಯುತ್ತಿದೆ. ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ವಿದ್ಯಾರ್ಥಿ ಅಭಿಷೇಕ್ ಒತ್ತಾಯಿಸಿದರು.

‘ನಿತ್ಯ ಟ್ರ್ಯಾಕ್ಟರ್ ಬಾಡಿಗೆ ₹2,000ದಿಂದ ₹3,000 ನೀಡಬೇಕು. ಚಾಲಕನಿಗೆ ಊಟ, ತಿಂಡಿ ವ್ಯವಸ್ಥೆ ಕಲ್ಪಿಸಬೇಕು. ರಾಗಿ ನೋಂದಣಿಯಿಂದ ಖರೀದಿಯಾಗುವವರೆಗೂ ನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕು. ಎಪಿಎಂಸಿ ಆವರಣದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ರೈತರು ಆಗ್ರಹಿಸಿದರು.

ರಾಗಿ ಖರೀದಿ ಮೇ 30ರವರೆಗೂ ನಡೆಯಲಿದೆ. ನಿತ್ಯ 2000ಕ್ಕೂ ಅಧಿಕ ಕ್ವಿಂಟಲ್ ಖರೀದಿ ನಡೆಯುತ್ತಿದೆ. ಗೋದಾಮು ಸಿಕ್ಕರೆ ಮತ್ತೊಂದು ಕಡೆ ಖರೀದಿ ಅರಂಭಿಸಲಾಗುವುದು. ಮೂಲ ಸೌಕರ್ಯ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ
ಪ್ರವೀಣ್, ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-44-2038997410

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.