ಹೊಸದುರ್ಗ: ‘ಬಡವರ ವಸತಿ ಕನಸು ನನಸು ಮಾಡುವ ಆಶ್ರಯ ಯೋಜನೆಯ ಸದುಪಯೋಗ ಪಡೆದುಕೊಂಡು, ಫಲಾನುಭವಿಗಳು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಾಣೇಹಳ್ಳಿಯ ಮಠದ ಆವರಣದಲ್ಲಿ ಮಂಗಳವಾರ ಸ್ವಸ್ತಿ ಗ್ರಾಮದ 25 ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

‘ಜಿಲ್ಲಾ ಪಂಚಾಯಿತಿ ಹಾಗೂ ಮಠದಿಂದ ಗ್ರಾಮದಲ್ಲಿ ಅಗತ್ಯ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಲು ಮುಂದಾಗಿದ್ದಾಗ, ಆರ್ಥಿಕ ನೆರವಿಗಾಗಿ ದಾನಿಗಳ ಅವಶ್ಯಕತೆ ಇತ್ತು. ಆಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಬಿ.ಟಿ. ಚನ್ನಬಸಪ್ಪ ಅವರ ಗಮನಕ್ಕೆ ತಂದಾಗ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿ ನೆರವು ನೀಡಿದ್ದರು. ಈ ಯೋಜನೆಯ ಒಟ್ಟು ವೆಚ್ಚದಲ್ಲಿ ಅರ್ಧ ಭಾಗವನ್ನು ಸ್ವತಃ ಅವರೇ ಭರಿಸಿದರೆ, ಉಳಿದ ವೆಚ್ಚವನ್ನು ಸರ್ಕಾರ ಭರಿಸಿತ್ತು’ ಎಂದರು.

‘ಪ್ರಸ್ತುತ ಈ ಭಾಗದಲ್ಲಿ ನಿವೇಶನದ ಬೆಲೆಯೇ ಅಂದಾಜು ₹ 8 ಲಕ್ಷಗಳಿದ್ದು, ಮನೆ ನಿರ್ಮಾಣ ವೆಚ್ಚ ಸೇರಿ ಒಟ್ಟು ₹ 15 ಲಕ್ಷಕ್ಕೂ ಹೆಚ್ಚು ತಗಲುತ್ತದೆ. ಆದರೆ, ಮಠವು ಹಣಕಾಸಿಗಾಗಿ ಯಾರ ಮೇಲೂ ಒತ್ತಡ ಹೇರುತ್ತಿಲ್ಲ. ಮಠದ ಹಣ ದುರುಪಯೋಗವಾಗಿದೆ ಎಂಬ ಅಪಕೀರ್ತಿ ಬಾರದಂತೆ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಸ್ವಸ್ತಿ ಗ್ರಾಮಕ್ಕೆ ಅಧಿಕೃತವಾಗಿ ‘ಬಿ.ಟಿ ಚನ್ನಬಸಪ್ಪ ನಗರ’ ಎಂದು ನಾಮಕರಣ ಮಾಡಲು ಸೂಚಿಸಲಾಗಿದೆ’ ಎಂದರು.

‘ಮಠದ ವತಿಯಿಂದ ನೀಡಲಾದ ಈ ಮನೆಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಮಾರಾಟ ಮಾಡುವಂತಿಲ್ಲ’ ಎಂದು ಸೂಚಿಸಿದರು.

ಪಿಡಿಒ ಲಿಂಗರಾಜ್, ಮುಖಂಡರಾದ ಎಸ್.ಆರ್. ಚಂದ್ರಶೇಖರಯ್ಯ, ಲಿಂಗರಾಜ್ ಸೇರಿದಂತೆ ಫಲಾನುಭವಿಗಳಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-44-1198593552

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.