ಹೊಸದುರ್ಗ: ‘ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡರೆ ಲಾಭ ಗಳಿಸಬಹುದು’ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಬಿ.ಇ ಪದವೀಧರ ಎಸ್.ಅರುಣ್ ಕುಮಾರ್ ಮೀನು ಸಾಕಾಣಿಕೆಯಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅರುಣ್ ಕುಮಾರ್ ಕೋವಿಡ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡು ಗ್ರಾಮ ಸೇರಿದ್ದರು. 10 ಎಕರೆ ತೋಟವಿದ್ದು, ಅದರ ನಿರ್ವಹಣೆ ಮಾಡುತ್ತಿದ್ದರು. ಕೃಷಿಯಲ್ಲಿ ವಿನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಮೀನು ಕೃಷಿ ಆರಂಭಿಸಿದರು.

ಅಂದಾಜು ₹ 2.50 ಲಕ್ಷ ವೆಚ್ಚದಲ್ಲಿ 200 ಅಡಿ ಉದ್ದ, 100 ಅಡಿ ಅಗಲ ಹಾಗೂ 10 ಅಡಿ ಆಳದ ಬೃಹತ್ ಕೃಷಿ ಹೊಂಡ ನಿರ್ಮಿಸಿದರು. ಅದರಲ್ಲಿ 7 ಅಡಿ ನೀರು ತುಂಬಿಸಿ ಸುತ್ತಲೂ ಪರದೆ ಕಾಂಪೌಂಡ್ ನಿರ್ಮಿಸಿದರು. ₹ 1 ಲಕ್ಷ ವೆಚ್ಚದಲ್ಲಿ 5,000 ಹಾವು ತಲೆ ಮೀನುಮರಿಗಳನ್ನು ಆಂಧ್ರ ಪ್ರದೇಶದಿಂದ ತಂದು ಮೀನು ಸಾಕಾಣಿಕೆಗೆ ಮುಂದಾದರು.

ಬೆಳಗಾವಿ, ಹಾವೇರಿ, ಚಾಮರಾಜನಗರ, ಮಂಡ್ಯದ ಸ್ನೇಹಿತರಿಂದ ಸ್ಫೂರ್ತಿ ಪಡೆದು ಮೀನು ಕೃಷಿ ಆರಂಭಿಸಿದ ಅವರು ಅದರಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಬೆಂಗಳೂರಿನ ಹೆಸರುಘಟ್ಟಕ್ಕೆ ಒಂದೆರಡು ಬಾರಿ ಭೇಟಿ ನೀಡಿ ಮಾರ್ಗದರ್ಶನ ಪಡೆದಿದ್ದಾರೆ.

‘ಉತ್ತಮ ತಳಿಯ ಮೀನುಗಳನ್ನು ಆಯ್ಕೆ ಮಾಡಿ ತರಬೇಕು. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಚಳಿಯಿರುವ ಕಾರಣ, ಈ ಎರಡು ತಿಂಗಳು ಮೀನು ಸಾಕಾಣಿಕೆಗೆ ಯೋಗ್ಯವಲ್ಲ. ಒಂದು ಮೀನು 500 ಗ್ರಾಂ ನಿಂದ 2 ಕೆ.ಜಿಯಷ್ಟು ತೂಗುತ್ತದೆ. 3.5 ಟನ್ ಇಳುವರಿ ಸಿಕ್ಕಿದೆ. ವೆಚ್ಚ ಕಳೆದು ಕೆ.ಜಿ.ಗೆ ₹ 50 ರಂತೆ ಲಾಭ ಪಡೆಯಬಹುದು. ಕಾರ್ಮಿಕರನ್ನು ಅವಲಂಬಿಸದೇ ಸ್ವಯಂ ಆಗಿ ತೊಡಗಿಸಿಕೊಳ್ಳಬೇಕು’ ಎಂದು ಅರುಣ್ ಕುಮಾರ್ ತಿಳಿಸಿದರು.

ಮೀನು ಕೃಷಿ 9 ತಿಂಗಳ ಕೃಷಿಯಾಗಿದ್ದು, ಇದುವರೆಗೂ ಅವರು ₹ 7 ಲಕ್ಷ ಆದಾಯ ಪಡೆದಿದ್ದಾರೆ. ಇನ್ನೂ ₹ 2 ಲಕ್ಷ ಮೌಲ್ಯದ ಮರಿಗಳಿವೆ. ಅಡಿಕೆ ಹಾಗೂ ತೆಂಗಿನ ತೋಟದಿಂದ ವರ್ಷಕ್ಕೆ ಅಂದಾಜು ₹ 13 ಲಕ್ಷ ಆದಾಯ ಪಡೆಯುತ್ತಿದ್ದಾರೆ.

‘ಗುಜರಾತ್ ಮೂಲದ ಕಂಪನಿಗಳಿಂದ ಮೀನಿನ ಆಹಾರ ಖರೀದಿಸಿದೆ. ದಿನಕ್ಕೆ ಮೂರು ಬಾರಿ ಮೀನಿಗೆ ಆಹಾರ ಹಾಕಬೇಕು. ಸಿಟಾಕ್ಸ್, ಟೆಟ್ರಾಸೈಕ್ಲೀನ್, ಕ್ರೀಸ್ಟಲಿನ್, ಪೋಟ್ಯಾಷಿಯಂ ಪರಮಾಂಗನೇಟ್ ಮೆಡಿಸಿನ್ಗಳನ್ನು ಸಮಯಕ್ಕೆ ಸರಿಯಾಗಿ ನೀಡಬೇಕು. ಮುಗಿದ ನಂತರ ತೊಟ್ಟಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಮೀನು ಕೃಷಿಯಲ್ಲಿ ಕಡಿಮೆ ಕೆಲಸದಲ್ಲಿ ಅಧಿಕ ಲಾಭಗಳಿಸಬಹುದು. ದಿನಕ್ಕೆ 3 ಗಂಟೆ ಕೆಲಸ ಮಾಡಿದರೆ ಸಾಕು’ ಎಂದು ಅವರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-44-473125684

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.