ಹೊಸದುರ್ಗ: ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಶಕ್ತಿ ದೇವತೆ ಕರಿಯಮ್ಮ (ಬೇವಿನಾಳಮ್ಮ) ದೇವಿಯ ಜಾತ್ರಾ ಮಹೋತ್ಸವ ಏಪ್ರಿಲ್ 1ರಿಂದ 8ರದವರೆಗೆ ನಡೆಯಲಿದೆ.

1ರಂದು ಧ್ವಜಾರೋಹಣ, ಭೇರಿತಾಂಡನ, ಅಂಕುರಾರ್ಪಣೆ ಸೇವೆ, ಚಪ್ಪರದ ಸೇವೆ, ಮಧ್ಯಾಹ್ನ ಮಾಡದಕೆರೆ ಗ್ರಾಮದಲ್ಲಿ ಗೌಡರ ವಂಶಸ್ಥರು ಹಾಗೂ ಗ್ರಾಮಸ್ಥರಿಂದ ಮದುವಣಗಿತ್ತಿ ಶಾಸ್ತ್ರ ನಡೆಯಲಿದೆ. ಸಂಜೆ 4 ಗಂಟೆಗೆ ಉಯ್ಯಾಲೆ ಉತ್ಸವ ನೆರವೇರಲಿದೆ.

3ರದಂದು ನಡೆಮುಡಿ, ಜಲಧಿ ಗಂಗಾಸ್ನಾನ, ಮದಾಲ್ಸೆ ಉತ್ಸವ, 4ರಂದು ರಾತ್ರಿ ಹೂವಿನ ಉತ್ಸವ ಜರುಗಲಿವೆ. ಏ.5ರಂದು ಸರಗಂಬಲಿ ಸೇವೆ, ಗದ್ದುಗೆ ಕಂಬಳಿ ಸೇವೆ, ಉಯ್ಯಾಲೆ ಉತ್ಸವ ಆಯೋಜಿಸಲಾಗಿದೆ.

6ರಂದು ಶ್ರೀದೇವಿಯವರ ರಥೋತ್ಸವ ಜರುಗಲಿದೆ. 7ರಂದು ಮಧ್ಯಾಹ್ನ ಸಿಡಿ ಉತ್ಸವ, ಹೂವಿನ ಉತ್ಸವ ನಡೆಯಲಿವೆ. 8 ರಂದು ಬೆಳಿಗ್ಗೆ 10ಕ್ಕೆ ಓಕಳಿ ಸೇವೆ, ಸಂಜೆ 6ಕ್ಕೆ ಅಮ್ಮನ ಉತ್ಸವ ಬೇವಿನಹಳ್ಳಿ ಗ್ರಾಮದಿಂದ ಲಕ್ಕಿಹಳ್ಳಿ ಗ್ರಾಮದ ದಾರಮಾದೇಶ್ವರ ಸ್ವಾಮಿಯ ಸನ್ನಿಧಿಗೆ ಬರಲಿದೆ ಎಂದು ಬೇವಿನಹಳ್ಳಿ ಕರಿಯಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರ ಅಭಿವೃದ್ಧಿ ಸೇವಾ ಟ್ರಸ್ಟ್ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-44-1770717659

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.