ಹೊಸದುರ್ಗ: ದೇವಾಲಯಗಳ ಹುಂಡಿಯಲ್ಲಿದ್ದ ಹಣ ಕಳವು ಮಾಡುತ್ತಿದ್ದ ಆರೋಪಿಗಳನ್ನು ಬುಧವಾರ ಬಂಧಿಸಿರುವ ಹೊಸದುರ್ಗ ಪೊಲೀಸರು, ಆರೋಪಿಗಳಿಂದ ₹20,000 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬಜಾಜ್ ಡಿಸ್ಕವರಿ ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಸಿದ್ದರಹಳ್ಳಿ ಗ್ರಾಮದ ಪ್ರಭಾಕರ್ ಅಲಿಯಾಸ್ ಪ್ರಭು, ಅಜ್ಜಂಪುರ ತಾಲ್ಲೂಕಿನ ಚಿಕ್ಕನಾಗವಂಗಲದ ಸದಾನಂದ ಹಾಗೂ ಸ್ವಾಗತ್ ಬಂಧಿತರು.

ಅಕ್ಟೋಬರ್ನಲ್ಲಿ ದೇವಪುರ ಸಮೀಪದ ಹಾಲುರಾಮೇಶ್ವರ ಕ್ಷೇತ್ರದ ಗಂಗಾಮಾತೆ ದೇವಾಲಯದಲ್ಲಿ ಹುಂಡಿ ಕಳವು ಆಗಿರುವ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಪಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಎಸ್ಪಿ ಶಿವಕುಮಾರ್ ಆರ್., ಹಿರಿಯೂರು ಉಪವಿಭಾಗದ ಡಿವೈಎಸ್ಪಿ ಶಿವಕುಮಾರ್ ಟಿ.ಎಂ. ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ಪಿಐ ಕೆ.ಟಿ. ರಮೇಶ್, ಪಿಎಸ್ಐಗಳಾದ ಶ್ರೀಶೈಲ, ಮಹೇಶ್ ಕುಮಾರ್, ಸಿಬ್ಬಂದಿ ಕುಮಾರ್, ಉಮೇಶ್, ಗಂಗಾಧರ್, ತಿಪ್ಪೇಸ್ವಾಮಿ, ಚಂದ್ರಪ್ಪ, ರಾಜಣ್ಣ, ಸತೀಶ್ ಹಾಗೂ ಪ್ರಕಾಶ್ ತಂಡದಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-44-357583898

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.