ಹೊಸದುರ್ಗ: ಪಟ್ಟಣದ ಅಧಿದೇವತೆ ದುರ್ಗಾಂಬಿಕಾ ದೇವಿಯ ಹಾಲು ಪಲ್ಲಕ್ಕಿ ಉತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಬುಧವಾರ ಸಂಜೆ ದುರ್ಗಮ್ಮ ಹಾಗೂ ಬಂಡೆಮ್ಮ ದೇವಿಯ ಸಿಡಿ ಉತ್ಸವ ನಡೆಯಿತು. ಹಾಲು ಪಲ್ಲಕ್ಕಿ ಉತ್ಸವದ ಅಂಗವಾಗಿ ದೇವಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು. ಬಣ್ಣ ಬಣ್ಣದ ಹೂವುಗಳಿಂದ ದೇವಿಯ ಪಲ್ಲಕ್ಕಿಯನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ದೇವಿಗೆ ಹೂವಿನ ಬೃಹತ್ ಹಾರಗಳನ್ನು ಹಾಕಿದ್ದು ನೋಡುಗರ ಕಣ್ಮನ ಸೆಳೆಯಿತು.

ಸಂಜೆ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಇರಿಸಿ ಮಂಗಳಾರತಿ ನೇರವೇರಿಸಿ, ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವ ಹೊರಡುವ ವೇಳೆ ವರುಣನ ಸಿಂಚನವಾಯಿತು. ಇದು ಊರಿಗೆ ಶುಭ ಎಂದು ಭಕ್ತ ಸಮೂಹ ಹರ್ಷ ವ್ಯಕ್ತಪಡಿಸಿತು.

ದೇವಾಲಯದ ಆವರಣದಿಂದ ಆರಂಭವಾದ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಮಹಿಳೆಯರೂ ದೇವಿಗೆ ಪೂಜೆ ಸಲ್ಲಿಸಿ, ದೃಷ್ಟಿ ತಾಗದಂತೆ ಓಕಳಿ ಮಾಡಿ ಹಾಕಿದರು. ದೇವಾಲಯದ ಸಮಿತಿ ಸದಸ್ಯರು, ಮುಖಂಡರು ಹಾಗೂ ಭಕ್ತರು ಉತ್ಸವದೊಂದಿಗೆ ಸಾಗಿದರು.

ದೇವಾಲಯದ ಆವರಣದಲ್ಲಿ ಶುಕ್ರವಾರ ‘ಬೆಲ್ಲದ ರಾಶಿ’ ಸೇವೆ ನಡೆಯಲಿದೆ. ಹರಕೆ ಹೊತ್ತ ಭಕ್ತರು ಬೆಸ ಸಂಖ್ಯೆಯ ಬೆಲ್ಲವನ್ನು ದೇವಿಗೆ ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-44-652142884

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.