ಹೊಸದುರ್ಗ: ಪಟ್ಟಣದ ಅಧಿದೇವತೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಏ. 7ರಿಂದ ಏ. 21ರವರೆಗೆ ನಡೆಯಲಿವೆ.

ನಿತ್ಯ ಒಂದೊಂದು ಕಾರ್ಯಕ್ರಮ ಆಯೋಜಿಸಿ, ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ.

ಏ. 7ರಂದು ರಾತ್ರಿ 8.30ಕ್ಕೆ ಧ್ವಜಾರೋಹಣದ ಮೂಲಕ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಗಂಗಾಪೂಜೆ ನಂತರ ರಾತ್ರಿ 10ಗಂಟೆಗೆ ಮಧುವಣಿಗೆ ಶಾಸ್ತ್ರ ನಡೆಯಲಿದೆ.

ಏ. 8ರಂದು ಮಹಿಷ ಮರ್ದಿನಿಯ ರೂಪದಲ್ಲಿ ದುರ್ಗಾಂಬಿಕಾ ದೇವಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಏ. 9ರಿಂದ ಶಿವನೇಕಟ್ಟೆ, ಹೊಸಹಳ್ಳಿ ಹಾಗೂ ಬಜ್ಜಪ್ಪನಹಟ್ಟಿ ಗ್ರಾಮಗಳಲ್ಲಿ ದೇವಿ ಭಕ್ತರಿಂದ ಸೇವೆ ಸ್ವೀಕರಿಸಲಿದ್ದಾಳೆ. ಏ. 12ರಂದು ದುರ್ಗಾಂಬಿಕಾದೇವಿ ಅಶ್ವವಾಹನೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಏ. 13ರಂದು ಬೆಳಿಗ್ಗೆ 8ಕ್ಕೆ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಗೊರವಿನಕಲ್ಲು ಗ್ರಾಮಕ್ಕೆ ಕರೆದೊಯ್ಯಲಾಗುತ್ತದೆ.

ಏ. 14ರಂದು ಬೆಳಿಗ್ಗೆ 9ಕ್ಕೆ ರಥೋತ್ಸವ, 10.30 ರಿಂದ ಮಜ್ಜಿಗೆ ಹಾಗೂ ಪಾನಕ ಸೇವೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಪಾನಕದ ಬಂಡಿ, ಸಂಜೆ 5 ಗಂಟೆಗೆ ಬೇವಿನ ಸೀರೆ ಕಾರ್ಯಕ್ರಮವಿರುತ್ತದೆ.

ಏ. 15ರಂದು ಮಧ್ಯಾಹ್ನ 3 ಗಂಟೆಯಿಂದ ಸಿಡಿ ಉತ್ಸವ, ಏ. 16ಕ್ಕೆ ಹಾಲು ಪಲ್ಲಕ್ಕಿ ಉತ್ಸವ, ಏ. 17ಕ್ಕೆ ಬೆಲ್ಲದ ರಾಶಿ, ರಾಶಿ ಬುತ್ತಿ ಎಡೆ, ಏ. 18ಕ್ಕೆ ಕಂಕಣ ವಿಸರ್ಜನೆ, ಏ. 21ರಂದು ಸಿದ್ದಪ್ಪನ ಬೆಟ್ಟದಲ್ಲಿ ಮಧ್ಯಾಹ್ನ 1 ಗಂಟೆಗೆ ಪರೇವು ನಡೆಯಲಿದೆ.

ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯಿರಿ ಎಂದು ದುರ್ಗಾಂಬಿಕಾ ದೇವಸ್ಥಾನ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-44-645309901

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.