ಹೊಸದುರ್ಗ: ಪಟ್ಟಣದ ಅಧಿದೇವತೆ ದುರ್ಗಾಂಬಿಕಾ ದೇವಿಯ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 5 ಗಂಟೆಗೆ ವಾದ್ಯಗೋಷ್ಠಿಗಳೊಂದಿಗೆ ದೇವಾಲಯದ ಪ್ರದಕ್ಷಿಣೆ ನಂತರ ಅಲಂಕರಿಸಿದ ದೇವಿಯ ಮೂರ್ತಿಯ ರಥಾರೋಹಣ ನೆರವೇರಿತು. ಗೌಡರ ಮನೆಯಿಂದ ಬಂದ ಬುತ್ತಿಯ ನೈವೇದ್ಯ ಅರ್ಪಿಸಲಾಯಿತು.

ಮತ್ತೊಂದೆಡೆ ಶಾಸಕ ಬಿ.ಜಿ.ಗೋವಿಂದಪ್ಪ, ತಹಶೀಲ್ದಾರ್ ತಿರುಪತಿ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ನಾಗಭೂಷಣ್, ವಿವಿಧ ಪಕ್ಷಗಳ ಮುಖಂಡರು, ರಥೋತ್ಸವ ಸಮಿತಿ ಸದಸ್ಯರು ಹಾಗೂ ಪಟ್ಟಣ ನಿವಾಸಿಗಳು, ಸುತ್ತಮುತ್ತಲ ಗ್ರಾಮಗಳ ಜನರು ಪಟ್ಟಣದ ಗಣಪತಿ ದೇವರಿಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ಪೂಜಿಸಿದ ಹೂವಿನ ಹಾರವನ್ನು ತಂದು ತೇರಿಗೆ ಹಾಕಲಾಯಿತು. ಆಗ ಭಕ್ತರು ತೇರಿನ ಗಾಲಿಗೆ ಕಾಯಿ ಒಡೆದರು. ರಥದಲ್ಲಿದ್ದ ದೇವಿಗೆ ಪೂಜೆಯಾದ ಕೂಡಲೇ ಭಕ್ತರು ಹರ್ಷೋದ್ಗಾರದೊಂದಿಗೆ ರಥವನ್ನು ಎಳೆದರು. ಈಶ್ವರ ದೇವಾಲಯದವರೆಗೂ ರಥ ಸಾಗಿತು. ಅರ್ಚಕರು ಪೂಜಾ ವಿಧಿವಿಧಾನ ನೆರವೇರಿಸಿ, ದೇವರನ್ನು ರಥದಲ್ಲಿ ಹಿಮ್ಮುಖವಾಗಿ ತಿರುಗಿಸಿ ಪ್ರತಿಷ್ಠಾಪಿಸಿದರು. ರಥ ಸ್ವಸ್ಥಾನ ತಲುಪಿತು.

ಭಕ್ತರು ಕೈಮುಗಿದು, ‘ಜೈ ಗೋವಿಂದ, ಜೈ ದುರ್ಗಮ್ಮ’ ಘೋಷಣೆ ಕೂಗಿದರು. ವಿವಿಧ ಬಣ್ಣ, ಹೊಂಬಾಳೆಗಳಿಂದ ಶೃಂಗರಿಸಲಾಗಿದ್ದ ರಥಕ್ಕೆ ವಿವಿಧ ಬಗೆಯ ಹೂವುಗಳಿಂದ ತಯಾರಿಸಿದ ಬೃಹತ್ ಗಾತ್ರದ ಹೂವಿನ ಹಾರಗಳು, ಬಗೆ ಬಗೆಯ ಹೂವುಗಳಿಂದ, ಓಂ, ದುರ್ಗಾಂಬಾ ಎಂದು ಬರೆದಿದ್ದ ತೋರಣ ರಥದ ಅಂದವನ್ನು ಹೆಚ್ಚಿಸಿದ್ದವು.

ರಥದ ಬೀದಿಯಲ್ಲಿ ತೇರು ಬರುತ್ತಿದ್ದಂತೆಯೇ ಇಷ್ಟಾರ್ಥ ಈಡೇರಿಸುವಂತೆ ಕೋರಿ ಭಕ್ತರು ಬಾಳೆಹಣ್ಣು, ಮೆಣಸು, ಸಮರ್ಪಿಸಿದರು. ಇನ್ನೂ ಹಲವರು ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯಲು ಪ್ರಯತ್ನಿಸುತ್ತಿದ್ದರು. ತೇರಿನ ಬೀದಿಯಲ್ಲಿನ ಇಕ್ಕೆಲಗಳ ಮನೆಗಳ ಮೇಲೆ ನಿಂತು ಭಕ್ತರು ರಥೋತ್ಸವದ ವೀಕ್ಷಿಸಿದರು.

ಬೆಳಿಗ್ಗೆ 10 ಗಂಟೆಗೆ ಬಿಸಿಲು ಆವರಿಸುತ್ತಿತ್ತು. ಕಿರಿದಾದ ಜಾಗದಲ್ಲಿ ಜನರು ಬಿಸಿಲನ್ನು ಲೆಕ್ಕಿಸದೆ, ದೇವಿಯ ರಥೋತ್ಸವ ಕಣ್ತುಂಬಿಕೊಂಡರು.

ರಥೋತ್ಸವದ ನಂತರ ದೇವಾಲಯದ ಆವರಣದಲ್ಲಿ ಭಕ್ತರು ಮಜ್ಜಿಗೆ ಜ್ಯೂಸ್, ಐಸ್ಕ್ರೀಮ್ಗಳನ್ನು ವಿತರಿಸಿದರು. ದೇವಾಲಯದ ಸಮಿತಿ ವತಿಯಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಥೋತ್ಸವದ ನಂತರ ಮಂಗಳವಾರ ಬೇವಿನ ಸೀರೆ ಹಾಗೂ ಪಾನಕದ ಬಂಡಿ ಸೇವೆ ನಡೆಯಿತು. ರಾತ್ರಿ 7 ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-44-1322180879

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.