ಹೊಸದುರ್ಗ: ಕೆಲ ದಿನಗಳಿಂದ ಸುರಿದ ಹದ ಮಳೆಯಿಂದಾಗಿ ರೈತರು ಸಂತಸಗೊಂಡಿದ್ದು, ಈಗಾಗಲೇ ಭೂಮಿ ಸಿದ್ಧತೆ ಮಾಡಿಕೊಂಡಿರುವ ಕೆಲ ರೈತರು ಈರುಳ್ಳಿ ಬಿತ್ತನೆಗೆ ಮುಂದಾಗಿದ್ದರೆ, ಇನ್ನೂ ಕೆಲ ರೈತರು ಹೊಲ ಹಸನು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಮಾಗಿ ಉಳುಮೆ ನಂತರ ರೈತರು ಕೊಟ್ಟಿಗೆ ಗೊಬ್ಬರ ಬೆರೆಸಿ, ಭೂಮಿಯನ್ನು ಬಿತ್ತನೆಗೆ ಹದ ಮಾಡಿಕೊಂಡಿದ್ದರು. ಈಚೆಗೆ ಸುರಿದ ಮಳೆಯಿಂದಾಗಿ ಭೂಮಿ ಹದವಾಗಿದ್ದು, ಈರುಳ್ಳಿ ಬೆಳೆಯುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಾಲ್ಲೂಕಿನ ಶೆಟ್ಟಿಹಳ್ಳಿ, ಶ್ರೀರಂಗಾಪುರ, ಬಾಗೂರು, ಚಿಕ್ಕಯಗಟಿ, ಆನಿವಾಳ, ಹೊನ್ನೆಕೆರೆ, ಐಲಾಪುರ, ಮಂಟೇನಹಳ್ಳಿ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ರೈತರು ಈರುಳ್ಳಿ ಬೀಜ ಬಿತ್ತನೆಯಲ್ಲಿ ತೊಡಗಿದ್ದಾರೆ.

‘₹400ರಿಂದ ₹450ಗೆ ಒಂದು ಸೇರು ಬೀಜ ಖರೀದಿಸಿ, ಎಕರೆಗೆ 6 ಸೇರು ಬೀಜ ಚೆಲ್ಲಲಾಗಿದೆ. ಇದಕ್ಕೂ ಮೊದಲು ಎಕರೆಗೆ ಎರಡು ಲೋಡ್ನಂತೆ 3 ಎಕರೆಗೆ 6 ಲೋಡ್ ಕೊಟ್ಟಿಗೆ ಗೊಬ್ಬರ ಹಾಕಲಾಗಿದೆ. ನಂತರ ತಳಗೊಬ್ಬರವಾಗಿ ಡಿಎಪಿ ಬಳಸಲಾಗಿದೆ. ಬೀಜೋಪಚಾರ ಮಾಡಿದ ನಂತರ ಬಿತ್ತನೆ ಕಾರ್ಯ ಆರಂಭವಾಗಿದೆ. 3 ಎಕರೆ ಭೂಮಿಗೆ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಇನ್ನೂ ಮಳೆಯಾದರೆ ಇನ್ನೂ 9 ದಿನಗಳಲ್ಲಿ ಸಸಿ ಭೂಮಿಯಿಂದ ಮೇಲೆ ಬರಲಿದೆ’ ಎನ್ನುತ್ತಾರೆ ಕಸಬಾ ಹೋಬಳಿಯ ಶ್ರೀರಂಗಾಪುರ ಗ್ರಾಮದ ರೈತ ಎಚ್. ನಿರಂಜನ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-44-335326008

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.