ಹೊಸದುರ್ಗ: ಇಲ್ಲಿನ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ಅಂತರ್ ಜಿಲ್ಲಾ ಮನೆ ಕಳ್ಳತನದ ಆರೋಪಿಗಳನ್ನು ಬಂಧಿಸಲಾಗಿದೆ.

ಹೊಸದುರ್ಗ ಪಟ್ಟಣದ ನಿವಾಸಿ ಹಸೇನ್ (22), ದಾವಣಗೆರೆ ತಾಲ್ಲೂಕು ನಾಗರಕಟ್ಟೆ ಗ್ರಾಮದ ನಿವಾಸಿ ಪುರುಷೋತ್ತಮ ನಾಯ್ಕ (23), ದಾವಣಗೆರೆ ನಗರದ ನಿವಾಸಿಗಳಾದ ಪ್ರವೀಣ್ ವಿ. ಗೌಡ (25), ದಿಲೀಪ್ ಜಿ. (23) ಬಂಧಿತ ಆರೋಪಿಗಳು.

ಬಂಧಿತರಿಂದ ಒಟ್ಟು ₹ 10.66 ಲಕ್ಷ ಮೌಲ್ಯದ 76 ಗ್ರಾಂ ಬಂಗಾರದ ಆಭರಣಗಳು, ₹ 1.96 ಲಕ್ಷ ಮೌಲ್ಯದ 750 ಗ್ರಾಂ. ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಕೊಪ್ಪಳ, ತುಮಕೂರು, ದೊಡ್ಡಬಳ್ಳಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಎಸ್.ಪಿ. ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್, ಡಿವೈಎಸ್ಪಿ ಶಿವಕುಮಾರ್ ಟಿ. ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಹೊಸದುರ್ಗ ಪಿ.ಐ. ರಮೇಶ್ ಕೆ.ಟಿ, ಪಿಎಸ್ಐ ಶ್ರೀಶೈಲ, ಮಹೇಶ್ ಕುಮಾರ್ ಎನ್, ಅನ್ನಪೂರ್ಣಮ್ಮ, ಸಿಪಿಐ ಶಿವರಾಜ್, ಪ್ರಿಯಾಂಕಾ, ಸಿಬ್ಬಂದಿ ಕುಮಾರ್, ಉಮೇಶ್, ಗಂಗಾಧರ, ತಿಪ್ಪೇಸ್ವಾಮಿ, ಚಂದ್ರಪ್ಪ, ದಾದಾಪೀರ್, ರಾಜಣ್ಣ, ಸತೀಶ್ ಹಾಗೂ ಪ್ರಕಾಶ್ ತಂಡದಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-44-1265815859

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.