ಹೊಸದುರ್ಗ: ‘ರೈತರ ಹಿತಕ್ಕಾಗಿಯೇ ಶ್ರಮಿಸುತ್ತಿರುವ ಪಕ್ಷ ಜೆಡಿಎಸ್’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಹೇಳಿದರು.

ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಗುರುವಾರ ನಡೆದ ಜೆಡಿಎಸ್ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂಬರುವ ಚುನಾವಣೆಗಳನ್ನು ಎದುರಿಸಲು ಮತ್ತಷ್ಟು ಸಂಘಟನಾ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಅಭ್ಯರ್ಥಿಗಳ ಆಯ್ಕೆ ಪಕ್ಷದ ತೀರ್ಮಾನದ ಮೇರೆಗೆ ನಡೆಯಲಿದ್ದು, ತಾಲ್ಲೂಕಿನ ಎಲ್ಲಾ ಬೂತ್ಗಳಲ್ಲಿ ಪಕ್ಷವನ್ನು ಸಜ್ಜುಗೊಳಿಸಿ ಕಾರ್ಯಕರ್ತರನ್ನು ಹುರಿದುಂಬಿಸಲಾಗುವುದು. ಅಕ್ರಮ ತಡೆಗೆ ಚುನಾವಣಾ ಆಯೋಗ ಕಡಿವಾಣ ಹಾಕಿದ್ದು, ಅಕ್ರಮ ಮತದಾರರನ್ನು ಪರಿಷ್ಕರಣಾ ಪಟ್ಟಿಯಿಂದ ತೆರವುಗೊಳಿಸಲಿದೆ ಎಂದು ಹೇಳಿದರು.

ಜೆಡಿಎಸ್ ಪಕ್ಷದಲ್ಲಿ ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಸದಾ ಗೌರವವಿದೆ. ಬೂತ್ ಮಟ್ಟದ ಕಾರ್ಯಕರ್ತರನ್ನು ಸಂಘಟಿಸಿ ಪಕ್ಷವನ್ನು ಬಲಪಡಿಸಲಾಗುವುದು. ಜಿಲ್ಲಾ ಘಟಕದ ಅಧ್ಯಕ್ಷರು ಹೊಸದುರ್ಗ ಕ್ಷೇತ್ರಕ್ಕೆ ಸ್ಥಳೀಯ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು. ಹೊಸದುರ್ಗದಲ್ಲಿ ಯುವಕರನ್ನು ಬೆಳೆಸುವ ಏಕೈಕ ಪಕ್ಷ ಜೆಡಿಎಸ್ ಎಂದು ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಕೆ. ಕಿರಣ್ ತಿಳಿಸಿದರು.

ಈ ವೇಳೆ ಜೆಡಿಎಸ್ ಮುಖಂಡರಾದ ಗಣೇಶ್ ಮೂರ್ತಿ, ಮೈಲಾರಪ್ಪ, ಕೊಂಡಾಪುರ ಡಿ.ಕೆ. ಶಿವಣ್ಣ, ಕಲ್ಪನಾ, ಮಮತಾ, ಶ್ರೀಧರ ನಾಯ್ಕ, ರಾಕೇಶ್ ಗೌಡ, ವೀರಭದ್ರಪ್ಪ, ಕರಿಬಸಪ್ಪ, ಈರಣ್ಣ, ಹೊನ್ನೇನಹಳ್ಳಿ ಕರಿಯಪ್ಪ, ವೇದಾವತಿ, ಪದ್ಮಾ, ಪ್ರಕಾಶ್, ಏಕಾಂತಪ್ಪ, ಅರುಣ್ ಕುಮಾರ್, ಅನಂತಪ್ಪ, ಪ್ರಕಾಶ್ ಹೇರೂರು, ಪರಮೇಶ್ವರಪ್ಪ, ಅರ್ಪತ್ ಖಾನ್, ದೇವರಾಜ್, ಸುನಿಲ್, ಹನುಮಂತಪ್ಪ, ಗಿರೀಶ್, ಅಣ್ಣಪ್ಪ, ಅಶೋಕ್, ಸುಧೀರ್, ರಾಮಣ್ಣ, ತಿಪ್ಪೇಶಪ್ಪ, ವಂದೇಗೌಡ, ಈಶ್ವರಪ್ಪ, ರಫಿಕ್, ವಜೀರ್ ಸಾಬ್ ಹಾಗೂ ಧನಂಜಯ ಸೇರಿ ಹಲವರಿಗೆ ಪಕ್ಷದ ವಿವಿಧ ಜವಾಬ್ದಾರಿಗಳನ್ನು ವಹಿಸಲಾಯಿತು.

ರಾಜ್ಯ ಘಟಕದ ಕಾರ್ಯದರ್ಶಿ ಪಿ. ಶಿವಶಂಕರ್ ಯಾದವ್ ಸೇರಿದಂತೆ ವಿವಿಧ ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-44-819363646

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.