ಹೊಸದುರ್ಗ: ತಾಲ್ಲೂಕಿನ ಕಂಚಿಪುರದಲ್ಲಿ ನೆಲೆಸಿರುವ ನಾಣ್ಯಪ್ರಿಯ ಹೊನ್ನಿನ ದೈವ ಕಂಚಿವರದರಾಜ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ನಸುಕಿನಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 31ರಿಂದ ಏ. 3ರವರೆಗೆ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ, ಭಕ್ತರಿಂದ ಮಡಿಲಕ್ಕಿ ಸೇವೆ ಸ್ವೀಕರಿಸಲಾಗಿತ್ತು.

ಶನಿವಾರ ಕಂಚಿದೇವರಬೆಟ್ಟದಲ್ಲಿ ಮುಳ್ಳಾವಿಗೆ ಸೇವೆ, ಭಾನುವಾರ ಧ್ವಜಾರೋಹಣದ ಮೂಲಕ ರಥೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿತ್ತು. ಸೋಮವಾರ ರಾತ್ರಿ ಕಂಚೀಪುರಕ್ಕೆ ಆಗಮನ. ಮಂಗಳವಾರ ಹಾಗೂ ಬುಧವಾರ ಕಂಚೀಪುರ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ, ಮಡಿಲಕ್ಕಿ ಸ್ವೀಕರಿಸಲಾಯಿತು. ಸ್ವರಗಂಬಲಿ ಸೇವೆ ಹೀಗೆ ನಿತ್ಯ ಒಂದೊಂದು ಉತ್ಸವ ಮಾಡುವ ಮೂಲಕ ಕಂಚಿವರದರಾಜ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿತ್ತು.

ದೇವಾಲಯದ ಆವರಣ ಹಾಗೂ ರಥವನ್ನು ವಿವಿಧ ಬಣ್ಣದ ಬಟ್ಟೆ ಹಾಗೂ ಬಾವುಟಗಳಿಂದ ಅಲಂಕರಿಸಲಾಗಿತ್ತು. ಹೂವಿನ ಬೃಹತ್ ಹಾರಗಳು, ವಿವಿಧ ಬಗೆಯ ಹೂಗಳಿಂದ ದೇವರ ಅಲಂಕಾರ, ತೇರಿನ ಅಲಂಕಾರ ಕಣ್ಮನ ಸೆಳೆಯಿತು. ದೇವಾಲಯ ಹಾಗೂ ರಥದ ಬೀದಿಯಲ್ಲಿ ದೀಪಾಲಂಕಾರ ಮಾಡಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ಕಂಚಿವರದರಾಜ ಸ್ವಾಮಿ ಹೆಸರಿನ ತಳಿರು ತೋರಣವನ್ನು ಬಗೆ ಬಗೆಯ ಹೂವುಗಳಿಂದ ಆಕರ್ಷಣೀಯಗೊಳಿಸಲಾಗಿತ್ತು.

ಬುಧವಾರ ರಾತ್ರಿ ಚಿಕ್ಕಬ್ಯಾಲದಕೆರೆ ಕರಿಯಮ್ಮ ಹಾಗೂ ಕಂಚಿವರದರಾಜ ಸ್ವಾಮಿ ಕೂಡು ಭೇಟಿ ನಡೆಯಿತು. ಗುರುವಾರ ಬೆಳಿಗ್ಗೆ 5 ಗಂಟೆಗೆ ಸ್ವಾಮಿ ವಿಶೇಷ ನರ್ತನದೊಂದಿಗೆ ರಥವೇರಿತು. ಸುತ್ತಲೂ ನಾಣ್ಯಗಳು ಚೆಲ್ಲಿದ್ದವು. ನಂತರ ಭಕ್ತರು ರಥ ಎಳೆದರು. ರಥ ಬೀದಿಯಲ್ಲಿ ರಥ ಸಾಗುವಾಗ ಗೋವಿಂದ, ಗೋವಿಂದ ಎಂಬ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಕೆಲವು ಕಡೆಗಳಲ್ಲಿ ರಥೋತ್ಸವದ ವೇಳೆ ಬಾಳೆಹಣ್ಣು ಸಮರ್ಪಿಸಿದರೇ, ಸ್ವಾಮಿಗೆ ನಾಣ್ಯಗಳನ್ನು ಸಮರ್ಪಿಸುವುದು ಪ್ರತೀತಿ. ರಥೋತ್ಸವದ ನಂತರ ಮುಳ್ಳಾವಿಗೆ ನಡೆಯಿತು. ರಥೋತ್ಸವದಲ್ಲಿ ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ‘ಸುಗ್ರೀವನ ಅವತಾರವಿರುವ ಕಂಚಿವರದರಾಜ ಸ್ವಾಮಿ ತನ್ನ ವಿಶೇಷ ಶಕ್ತಿಯ ಮೂಲಕ ಅಪಾರ ಭಕ್ತರನ್ನು ಹೊಂದಿದೆ. ಇಷ್ಟಾರ್ಥಗಳನ್ನು ಈಡೇರಿಸಿದಾಗ ಭಕ್ತರು ಬಂದು ಸ್ವಾಮಿಗೆ ನಾಣ್ಯಗಳನ್ನು ಸಮರ್ಪಿಸುವರು. ಹೊನ್ನಿನ ದೈವದ ಪ್ರತಿಯೊಂದು ಹಬ್ಬ, ಜಾತ್ರೆಯೂ ವಿಶೇಷವಾಗಿ ನಡೆಯುತ್ತದೆ’ ಎಂದು ಅರ್ಚಕರು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-44-1935176972

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.