ಹೊಸದುರ್ಗ: ತಾಲ್ಲೂಕಿನ ಕಸಬಾ ಹೋಬಳಿಯ ಮಳಲಿ ಗ್ರಾಮದಲ್ಲಿ ನೆಲೆಸಿರುವ ಕಲ್ಲೇಶ್ವರಸ್ವಾಮಿ ನೂತನ ದೇವಾಲಯದ ಪ್ರಾರಂಭೋತ್ಸವ, ನಂದಿ ಪ್ರತಿಷ್ಠಾಪನೆ, ಕಳಶಾರೋಹಣ, ಅಷ್ಟಬಂಧ ಕುಂಭಾಭಿಷೇಕ, ಧಾರ್ಮಿಕ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮಗಳು ಈಚೆಗೆ ಅದ್ದೂರಿಯಾಗಿ ನಡೆದವು.

ಹಿಂದಿನ ದಿನ ಬೆಳಿಗ್ಗೆ ಧ್ವಜಾರೋಹಣದ ನಂತರ ಮಳಲಿ ಕರಿಯಮ್ಮ ದೇವಿ, ಮಧುರೆಯ ಗುರು ಸಿದ್ಧರಾಮೇಶ್ವರ ಸ್ವಾಮಿ ಹಾಗೂ ಪೀಲಾಪುರದ ಆಂಜನೇಯ ಸ್ವಾಮಿ ದೇವರುಗಳ ಕೂಡುಭೇಟಿ ನಡೆಯಿತು. ಸಂಜೆ ಗಣಪತಿ ಪೂಜೆ, ಗಂಗಾ ಪೂಜೆ, ನೂತನ ದೇವಾಲಯ ಪ್ರವೇಶ, ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ದೇವನಾಂದಿ, ನೂತನ ಶಿಲಾವಿಗ್ರಹಗಳಿಗೆ ವ್ಯಾಸಪೂರ ಮಂಗಳಾರತಿ ನಡೆಯಿತು.

ಸೋಮವಾರ ನಸುಕಿನ 4ಕ್ಕೆ ಕಲ್ಲೇಶ್ವರ ಸ್ವಾಮಿಯ ಅಷ್ಟಬಂಧ ಪ್ರತಿಷ್ಠಾಪನೆ, ನೇತ್ರಬಂಧನ, ರುದ್ರಾಭಿಷೇಕ, ಕಳಶ ಪ್ರತಿಷ್ಠಾಪನೆ, ನವಗ್ರಹ ಪೂಜೆ, ರುದ್ರಹೋಮ, ಜಯಾಧಿಹೋಮ, ಪೂರ್ಣಾಹುತಿ ನಡೆಯಿತು. ಬೆಳಿಗ್ಗೆ ಗ್ರಾಮದ ದೊಡ್ಡಬಾವಿ ಹತ್ತಿರದಿಂದ ಪೂರ್ಣಕುಂಭ ಪೂಜೆಯೊಂದಿಗೆ ಸಕಲ ವಾದ್ಯ ಗೋಷ್ಠಿಗಳ ಸಮ್ಮುಖದಲ್ಲಿ ದೇವರುಗಳ ಮೆರವಣಿಗೆ ನಡೆಯಿತು. ಎಲ್ಲ ದೇವರುಗಳ ಸಮ್ಮುಖದಲ್ಲಿ ಶಿಖರ ಕಳಶಾರೋಹಣ, ಕುಂಭಾಭಿಷೇಕ, ಮಹಾಮಂಗಳಾರತಿ ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವೈಭವಯುತವಾಗಿ ನಡೆಯಿತು.

ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ‘ದೇವಾಲಯಗಳು ಶಾಂತಿಯ ತಾಣಗಳು, ಮನಸ್ಸಿಗೆ ಉಲ್ಲಾಸ ನೀಡುತ್ತವೆ. ಗ್ರಾಮದಲ್ಲಿ ಶಾಂತಚಿತ್ತತೆ ನೆಲೆಸಿರುತ್ತದೆ. ದೇವಾಲಯಗಳು ಪ್ರೀತಿ ವಾತ್ಸಲ್ಯದ ಕೇಂದ್ರ ತಾಣಗಳು. ಜಾತಿ– ಬೇಧ ಮರೆತು, ಎಲ್ಲ ಒಂದಾಗಿ ಬಾಳಬೇಕು’ ಎಂದು ಕಿವಿಮಾತು ಹೇಳಿದರು.

ಬಿಜೆಪಿ ಮುಖಂಡ ಎಸ್. ಲಿಂಗಮೂರ್ತಿ ಮಾತನಾಡಿದರು. ಸಚ್ಚಿದಾನಂದ ಟ್ರಸ್ಟ್ ಅಧ್ಯಕ್ಷ ಬಸವರಾಜ್, ಎಲ್.ಐ.ಸಿ ಅಧಿಕಾರಿ ನವೀನ್ ಕುಮಾರ್, ವಕೀಲ ರವಿಕುಮಾರ್, ಮುಖಂಡರಾದ ಸಿದ್ಧರಾಮಪ್ಪ, ಮರಿದಿಮ್ಮಪ್ಪ, ಸಫಾರಿ ಶಿವಲಿಂಗಪ್ಪ, ರವಿಕುಮಾರ್ ಡಿ, ದಿಲ್ಸೆ ದಿಲೀಪ್, ಶಿವುಮಠ ಸೇರಿ ಗ್ರಾಮದ ಮುಖಂಡರು, ಮಹಿಳೆಯರು, ಮಳಲಿ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-44-1017338888

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.