ಹೊಸದುರ್ಗ: ಜಿಲ್ಲೆಯಲ್ಲಿ ಅತಿ ಹೆಚ್ಚು ರಾಗಿ ಬೆಳೆಯುವ ತಾಲ್ಲೂಕು ಹೊಸದುರ್ಗ. ಬೆಂಬಲಬೆಲೆ ಯೋಜನೆಯಡಿ ಶ್ರೀರಾಂಪುರ ಹಾಗೂ ಹೊಸದುರ್ಗದಲ್ಲಿನ ಕೇಂದ್ರಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆ ನಡೆದು ಮೂರು ತಿಂಗಳು ಕಳೆದರೂ, ರೈತರ ಖಾತೆಗೆ ಹಣ ಜಮಾ ಆಗಿಲ್ಲ.

ಇದರಿಂದ ಪ್ರಸಕ್ತ ಮುಂಗಾರು ಹಂಗಾಮಿಗೆ ಭೂಮಿ ಅಣಿಗೊಳಿಸಲು ಅಗತ್ಯ ಹಣ ಸಿಗದೇ ಕೃಷಿಕರು ಸಮಸ್ಯೆ ಎದುರಿಸುವಂತಾಗಿದೆ.

ಈ ಹಿಂದೆ ಸಾಮಾನ್ಯವಾಗಿ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿದ ಒಂದೆರಡು ವಾರಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತಿತ್ತು. ಆದರೆ, ಈಗ ರಾಗಿ ಕೊಟ್ಟು ತಿಂಗಳುಗಳೇ ಕಳೆದಿವೆ. ಇದುವರೆಗೂ ಹಣ ಪಾವತಿಯಾಗಿಲ್ಲ. ಇಂದು ಅಥವಾ ನಾಳೆ ಖಾತೆಗೆ ಹಣ ಸೇರಬಹುದೆಂದು ಸಾವಿರಾರು ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಪ್ರತಿ ಕ್ವಿಂಟಲ್ ರಾಗಿಗೆ ₹ 4,886 ಬೆಂಬಲಬೆಲೆ ನಿಗದಿಪಡಿಸಲಾಗಿತ್ತು. ಮುಕ್ತ ಮಾರುಕಟ್ಟೆಗಿಂತ ಉತ್ತಮ ಬೆಲೆ ಸಿಗುವುದನ್ನು ಗಮನಿಸಿದ ರೈತರು ಹೆಚ್ಚು ರಾಗಿಯನ್ನು ಖರೀದಿ ಕೇಂದ್ರಕ್ಕೆ ನೀಡಿದ್ದಾರೆ.

ತಾಲ್ಲೂಕಿನಾದ್ಯಂತ 35,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ಹೊಸದುರ್ಗದ ಎಪಿಎಂಸಿ, ಟಿಎಪಿಸಿಎಂಎಸ್ ಗೋದಾಮು ಹಾಗೂ ಶ್ರೀರಾಂಪುರ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ತೆರೆದು, ಮಾರ್ಚ್ 12ರಿಂದ ರಾಗಿ ಖರೀದಿಸಲಾಗಿತ್ತು. 10,425 ರೈತರು ನೋಂದಣಿ ಮಾಡಿದ್ದರು.

ಒಟ್ಟು 2.62 ಲಕ್ಷ ಕ್ವಿಂಟಲ್ ರಾಗಿ ಖರೀದಿಯ ನಿರೀಕ್ಷೆ ಇದ್ದು, ಮೂರೂ ಕೇಂದ್ರಗಳಿಂದ ಇದುವರೆಗೆ 2.09 ಲಕ್ಷ ಕ್ವಿಂಟಲ್ ರಾಗಿ ಖರೀದಿಸಲಾಗಿದೆ. ಇನ್ನೂ 53,586 ಕ್ವಿಂಟಲ್ನಷ್ಟು ರಾಗಿ ಖರೀದಿ ಆಗಬೇಕಿದೆ.

‘ಬಿತ್ತನೆಬೀಜ, ರಸಗೊಬ್ಬರ ಹಾಗೂ ದುಬಾರಿ ಕೂಲಿಯಿಂದ ರೋಸಿ ಹೋಗಿರುವ ರೈತರು, ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಿದರೆ ಸಕಾಲಕ್ಕೆ ಹಣ ಪಾವತಿ ಆಗದಿರುವುದರಿಂದ ಸಂಕಷ್ಟದಿಂದ ಬಳಲುವಂತಾಗಿ. ಖರೀದಿ ಕೇಂದ್ರದ ಬಳಿ ಸರದಿಯಂತೆ ನಾಲ್ಕೈದು ದಿನಗಳು ಕಾದು ವಾಹನ ಬಾಡಿಗೆ ಹಾಗೂ ಊಟೋಪಚಾರ ಮುಂತಾದ ಖರ್ಚು ವೆಚ್ಚಗಳನ್ನು ನಿಭಾಯಿಸಿ, ಮಾರಾಟ ಮಾಡಿದರೆ ಇದುವರೆಗೂ ಹಣ ಪಾವತಿಯಾಗಿಲ್ಲ’ ಎಂದು ಬಾಗೂರು ಗ್ರಾಮದ ರೈತ ವೆಂಕಟೇಶ್ ‘ಪ್ರಜಾವಾಣಿ’ ಎದುರು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಮುಂಗಾರು ಬಿತ್ತನೆ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಜ್ಜಾಗಿದ್ದಾರೆ. ಆದರೆ, ಬಿತ್ತನೆ ಬೀಜ, ಗೊಬ್ಬರ ಖರೀದಿ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹಲವು ವೆಚ್ಚಗಳನ್ನು ನಿಭಾಯಿಸಲು ಹಣದ ಅವಶ್ಯಕತೆಯಿದೆ. ಬಡ್ಡಿ ರೂಪದಲ್ಲಿ ಸಾಲಕ್ಕೆ ಕೈಯೊಡ್ಡುವಂತಾಗಿದ್ದು, ರಾಗಿ ಮಾಡಿದ ಹಣ ಜಮಾ ಮಾಡಬೇಕು ಎಂದು ರೈತರು ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-44-2142095595

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.