ಹೊಸದುರ್ಗ: ‘ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ರಾಗಿ ಖರೀದಿಸದೇ ಸಬೂಬು ಹೇಳುತ್ತಾ ರೈತರನ್ನು ಗೋಳಾಡಿ ಸುತ್ತಿದ್ದಾರೆ’ ಎಂದು ಆರೋಪಿಸಿದ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಅವರು ಖರೀದಿ ಕೇಂದ್ರದ ಅಧಿಕಾರಿ, ಗ್ರೇಡರ್ ವಿರುದ್ಧ ಗುರುವಾರ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಎಪಿಎಂಸಿ ಹಾಗೂ ಟಿಎಪಿಸಿಎಂಎಸ್ ಆವರಣದಲ್ಲಿನ ರಾಗಿ ಖರೀದಿ ಸ್ಥಳಕ್ಕೆ ಭೇಟಿ ನೀಡಿ ಅವರು ಪರಿಶೀಲಿಸಿದರು.

‘ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಲು ಹಣ ಕೊಡಬೇಕು. ಹಣ ಕೊಟ್ಟರೆ ಮಾತ್ರ ರಾಗಿ ಖರೀದಿಸುತ್ತಾರೆ. ಇಲ್ಲದಿದ್ದರೆ ವಾಪಸ್ ಕಳುಹಿಸುತ್ತಾರೆ. ರಾಗಿ ಮಾರಿದ ನಂತರ ಚೌಕಾಸಿ ಮಾಡಿದರೆ ‘ಗ್ರೀನ್ ವೋಚರ್’ಗೆ ಸಹಿ ಹಾಕದೇ ಸತಾಯಿಸುತ್ತಾರೆ’ ಎಂದು ರೈತರು ಖರೀದಿ ಕೇಂದ್ರದ ಅವ್ಯವಸ್ಥೆಯ ವಿರುದ್ಧ ಗಂಭೀರ ಆರೋಪ ಮಾಡಿದರು.

ಓಡಿ ಹೋದ ಗ್ರೇಡರ್: ರೈತರೊಬ್ಬರಿಂದ ಹಣ ಪಡೆದಿರುವ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆಯೇ, ಗ್ರೇಡರ್ ಅಲ್ಲಿಂದ ಕಾಲ್ಕಿತ್ತರು. ‘ಫೋನ್ಪೇ’ ಮೂಲಕ ಹಣ ಹಾಕಿಸಿಕೊಂಡಿರುವ ಬಗ್ಗೆ ರೈತರು ಆರೋಪಿಸಿದರು.

ಕ್ರಮಕ್ಕೆ ಒತ್ತಾಯ: ಖರೀದಿ ಕೇಂದ್ರದ ಆವರಣದಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ ಸೇರಿದಂತೆ ಮೂಲ ಸೌಕರ್ಯಗಳಿಲ್ಲ. ರಾಗಿ ಸಾಗಿಸಲು ಲಾರಿಗಳನ್ನು ಕಳುಹಿಸುತ್ತಿಲ್ಲ. ಲಂಚ ಕೊಡದೇ ರಾಗಿ ಖರೀದಿ ಮಾಡುತ್ತಿಲ್ಲ. ಇಲ್ಲಿನ ಖರೀದಿ ಕೇಂದ್ರದ ಅಧಿಕಾರಿ ಹಾಗೂ ಗ್ರೇಡರ್ ವಿರುದ್ಧ ಕ್ರಮ ಜರುಗಿಸಬೇಕು. ಈಗಿನ ಗ್ರೇಡರ್ ಬದಲಾಯಿಸಿ ಬೇರೊಬ್ಬರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಚಿತ್ತಪ್ಪ, ಕಾರ್ಯದರ್ಶಿ ದೇವಿಗೆರೆ ಮಲ್ಲಿಕಾರ್ಜುನ್, ಜಗದೀಶ್, ಉಪಾಧ್ಯಕ್ಷ ಶಶಿಧರ, ಪನ್ನಗ ರಾಯ್ಕರ್, ಕಾರ್ಯಕರ್ತರು, ರೈತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-44-1501001141

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.