ಹೊಸದುರ್ಗ: ‘ಸರ್ಕಾರದಿಂದ ದೊರೆಯುವ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.

ತಾಲ್ಲೂಕಿನ ವಿವಿಧ ಭಾಗಗಳಲ್ಲಿ ₹ 5.6 ಕೋಟಿ ವೆಚ್ಚದ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಸಿ.ಸಿ. ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದ್ದು, ಶೀಘ್ರದಲ್ಲೇ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

₹ 1 ಕೋಟಿ ವೆಚ್ಚದಲ್ಲಿ ಬೆಲಗೂರು ಹೊಸದುರ್ಗ ಮುಖ್ಯ ರಸ್ತೆಯಿಂದ ಬೆನಕನಹಳ್ಳಿ ವರೆಗೆ ಸಿ.ಸಿ. ರಸ್ತೆ ನಿರ್ಮಾಣ. ₹ 60 ಲಕ್ಷ ವೆಚ್ಚದಲ್ಲಿ ಬೆಲಗೂರು, ಹೊಸದುರ್ಗ ಮುಖ್ಯ ರಸ್ತೆಯಿಂದ ಕಬ್ಳಳ ಹೊಸಹಟ್ಟಿವರೆಗೆ, ₹ 1 ಕೋಟಿ ವೆಚ್ಚದಲ್ಲಿ ಅರಲಹಳ್ಳಿ ಹೊಸೂರು ಗ್ರಾಮದಿಂದ ಅರಲಹಳ್ಳಿ ಗ್ರಾಮದವರೆಗೆ, ₹ 70 ಲಕ್ಷ ವೆಚ್ಚದಲ್ಲಿ ಹೊಸದುರ್ಗ ಶ್ರೀರಾಂಪುರ ಮುಖ್ಯ ರಸ್ತೆಯಿಂದ ಅರಲಹಳ್ಳಿ ಗ್ರಾಮದವರೆಗೆ, ₹ 80 ಲಕ್ಷ ವೆಚ್ಚದಲ್ಲಿ ಓಬಳಾಪುರ ಮತ್ತು ವೆಂಗಳಾಪುರ ಮುಖ್ಯ ರಸ್ತೆಯಿಂದ ಓಬಳಾಪುರ ಲಂಬಾಣಿಹಟ್ಟಿ ವರೆಗೆ, ₹ 1 ಕೋಟಿ ವೆಚ್ಚದಲ್ಲಿ ಹಿರಿಯೂರು ಮುಖ್ಯ ರಸ್ತೆಯಿಂದ ಇಂಚರ ಶಾಲೆ ಮುಖಾಂತರ ಜೋಡಿಶ್ರೀರಂಗಾಪುರ ಗೊಲ್ಲರಹಟ್ಟಿವರೆಗೆ, ₹ 50 ಲಕ್ಷ ವೆಚ್ಚದಲ್ಲಿ ಮಲ್ಲಪ್ಪನಹಳ್ಳಿ ಮುಖ್ಯ ರಸ್ತೆಯ ಜಂತಿಕೊಳಲು ಗೇಟ್ನಿಂದ ಮಂಟೇನಹಳ್ಳಿ ಗ್ರಾಮದವರೆಗೆ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-44-1615153848

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.