ಹೊಸದುರ್ಗ: ಮುಂಗಾರು ಪೂರ್ವ ಮಳೆ ಸುರಿಯುತ್ತಿದ್ದು, ತಾಲ್ಲೂಕಿನ ರೈತರು ಸಾವೆ ಬಿತ್ತನೆಗೆ ಸಜ್ಜಾಗಿದ್ದಾರೆ. ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ಸಾವೆ ಬೆಳೆಯುತ್ತಾರೆ.

2023–24ರಲ್ಲಿ ತಾಲ್ಲೂಕಿನಾದ್ಯಂತ 27,000 ಹಕ್ಟೇರ್ ಪ್ರದೇಶದಲ್ಲಿ, ಕಳೆದ ವರ್ಷ 19,250 ಹೆಕ್ಟೇರ್ ಪ್ರದೇಶದಲ್ಲಿ ಸಾವೆ ಬಿತ್ತನೆಯಾಗಿತ್ತು. ಈ ಬಾರಿ 25,000 ಹೆಕ್ಟೇರ್ ಬಿತ್ತನೆ ಗುರಿಯಿದೆ. ಸರ್ಕಾರದ ಬೆಂಬಲಬೆಲೆ ಯೋಜನೆ, ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವುದರಿಂದ ರೈತರು ಸಾವೆ ಬಿತ್ತನೆಯತ್ತ ಗಮನಹರಿಸಿದ್ದಾರೆ.

ಈಗಾಗಲೇ ಕಸಬಾ ಹೋಬಳಿಯಲ್ಲಿ ಬಿತ್ತನೆ ಆರಂಭವಾಗಿದೆ. ಇನ್ನೂ ಕೆಲವು ಕಡೆ ರೈತರು ಭೂಮಿ ಸಿದ್ಧತೆ ಮಾಡಿಕೊಂಡಿದ್ದು, ಇನ್ನೊಂದು ಮಳೆಯಾದರೆ ಸಾಕು, ಸಾವೆ ಬಿತ್ತನೆ ಮಾಡುತ್ತಾರೆ. ಸಾವೆ 80ರಿಂದ 90 ದಿನದ ಬೆಳೆಯಾಗಿದ್ದು, ಅಲ್ಪ ಮಳೆಗೂ ಉತ್ಕೃಷ್ಟವಾಗಿ ಬೆಳೆಯುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು ಎಂಬ ಕಾರಣದಿಂದ ರೈತರ ಚಿತ್ತ ಸಾವೆಯತ್ತ ಹರಿದಿದೆ.

‘ಏಪ್ರಿಲ್ ತಿಂಗಳಲ್ಲಿ ಭೂಮಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಎಕರೆಗೆ 18ರಿಂದ 20 ಸೇರು ಸಾವೆ ಬಿತ್ತನೆ ಬೀಜ ಬಳಸಲಾಗಿದೆ. ಈಗಾಗಲೇ 8 ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದೆ. ನಿಗದಿತವಾಗಿ ಮಳೆಯಾದರೆ, ಎಕರೆಗೆ 8ರಿಂದ 10 ಕ್ವಿಂಟಲ್ ಸಾವೆ ಬೆಳೆಯಬಹುದು’ ಎಂದು ರೈತ ವೆಂಕಟೇಶ್ ಹೇಳೀದರು.

‘ಎರಡು ವರ್ಷಗಳಿಂದೆ ಸಾವೆ ಬೆಳೆಗೆ ಸಮರ್ಪಕ ಬೆಲೆ ಸಿಗದ ಕಾರಣ ರೈತರು ಸಂಕಕಷ್ಟ ಎದುರಿಸಿದ್ದರು. ಆದರೀಗ ಬೆಂಬಲಬೆಲೆ ಘೋಷಣೆ ಆಗಿದ್ದು, ಸಾವೆ ಬೆಳೆಯುವವರ ಸಂಖ್ಯೆಯೂ ಅಧಿಕವಾಗಿದೆ’ ಎಂದು ಅವರು ಹೇಳಿದರು.

ಸಿರಿಧಾನ್ಯ ಕ್ವಿಂಟಲ್ಗೆ ₹ 4,886 ಬೆಂಬಲ ಬೆಲೆ ನಿಗದಿಯಾಗಿತ್ತು. ಈ ಬಾರಿ ₹ 319 ಬೆಲೆ ಹೆಚ್ಚಳವಾಗಿದ್ದು, ಕ್ವಿಂಟಲ್ ಗೆ ₹ 5,203 ದೊರೆಯಲಿದೆ.

‘ರೈತಸಿರಿ ಯೋಜನೆಯಡಿ ಸರ್ಕಾರ ಸಿರಿಧಾನ್ಯ ಬೆಳೆಗಾರಿಗೆ ಹೆಕ್ಟೇರ್ಗೆ ₹ 10,000 ಪ್ರೋತ್ಸಾಹಧನ ನೀಡಿದೆ. 4 ವರ್ಷಗಳಿಂದ ತಾಲ್ಲೂಕಿನ ರೈತರ ಖಾತೆಗೆ ₹ 37.96 ಕೋಟಿ ಪ್ರೋತ್ಸಾಹಧನ ಹಾಕಲಾಗಿದೆ. ರೈತರು ಹರಳು ರೂಪದ ಯೂರಿಯಾ ರಸಗೊಬ್ಬರದ ಬದಲಾಗಿ ನ್ಯಾನೋ ಯೂರಿಯಾ ಅಥವಾ ಸಾವಯವ ಗೊಬ್ಬರ ಬಳಸಬೇಕು. ಇದರಿಂದಾಗಿ ನಮ್ಮೆಲ್ಲರ ಆರೋಗ್ಯದ ಜೊತೆಗೆ ಭೂಮಿಯ ಆರೋಗ್ಯವೂ ವೃದ್ಧಿಸುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಹೇಳಿದರು.

‘ಈ ಬಾರಿ ಮಳೆ ಸಮಯಕ್ಕೆ ಸರಿಯಾಗಿ ಸುರಿಯುವ ನಿರೀಕ್ಷೆಯಿದೆ. ಬೆಳೆ ಕಟಾವು ಆದ ಕೂಡಲೇ, ಸಕಾಲದಲ್ಲಿ ಖರೀದಿ ಕೇಂದ್ರ ಆರಂಭ ಆಗಬೇಕು. ಖರೀದಿ ಕೇಂದ್ರದ ಬಳಿ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವು ಸೌಲಭ್ಯಗಳು ಸಕಾಲದಲ್ಲಿ ಆಗಬೇಕು. ಬೆಳೆ ಸಮೀಕ್ಷೆ, ನೋಂದಣಿ, ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು’ ಎಂದು ರೈತರು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-44-122599430

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.