ಹೊಸದುರ್ಗ: ‘ವ್ಯಕ್ತಿ ಬೆಳೆಯಬೇಕಾದರೆ ತನ್ನಲ್ಲಿರುವ ಅರಿಷಡ್ವರ್ಗಗಳನ್ನು ಕಳೆದುಕೊಳ್ಳಬೇಕು. ಮಾನವ ಇವುಗಳಿಂದ ಹೊರಬರಲು ಸಂಸ್ಕಾರ ಮುಖ್ಯ. ಸಂಸ್ಕಾರವಿಲ್ಲದ ಮನುಷ್ಯ ಶಿವನಾಗದೆ ಶವವಾಗುವನು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಜಗತ್ತಿನ ಅಸಂಖ್ಯಾತ ಜೀವರಾಶಿ ಗಳಿಗೂ ಮಾನವನಿಗೂ ಇರುವ ಮುಖ್ಯ ವ್ಯತ್ಯಾಸ ಅರಿವು. ಮನುಷ್ಯನಿಗೆ ಮಾತ್ರ ಇರುವ ಈ ಅರಿವಿನ ಪರಿಧಿಯಿಂ ದಾಗಿಯೇ ಆತ ಜಗತ್ತಿನ ಕಿರೀಟದಂತೆ ಕಂಗೊಳಿಸುವನು. ಮಾನವನಲ್ಲಿ ಹೊಟ್ಟೆ ತುಂಬಿದ್ದರೂ ದ್ವೇಷ, ಅಸೂಯೆ ಸದಾ ಕಾಡುತ್ತಿರುತ್ತದೆ. ಆತ ಕಾಡುಪ್ರಾಣಿಗಿಂತ ಕಡೆಯಾಗದೆ ಆದರ್ಶದ ಬದುಕು ಸಾಗಿಸಬೇಕು. ಆಸ್ತಿ, ಒಡವೆ, ಅಧಿಕಾರಗಳಿಗಿಂತ ಶಿವಜ್ಞಾನವೇ ಮುಖ್ಯ’ ಎಂದರು.

‘ನಾವು ಹೊರಗಿನ ಗುಡಿ-ಗುಂಡಾರಗಳಿಗೆ ಅಲೆಯುವ ಜನವಾಗಬಾರದು. ಚೈತನ್ಯವಿಲ್ಲದ ಜಡ ವಿಗ್ರಹಗಳನ್ನು ಪೂಜಿಸುವ ಬದಲು, ನಮ್ಮ ಒಳಗಿರುವ ಚೈತನ್ಯವನ್ನು ಗುರುತಿಸಬೇಕು. ಹೊರಗಿನ ಯಾವುದೇ ದೇವರು ನಮಗೆ ಶಾಪವನ್ನಾಗಲಿ, ವರವನ್ನಾಗಲಿ ಕೊಡುವುದಿಲ್ಲ. ರಸ್ತೆಯಲ್ಲಿ ಹೋಗುವಾಗ ನಿಯಮ ಪಾಲಿಸು, ಯಾರಿಗೂ ಕೇಡು ಮಾಡಬೇಡ ಎಂಬ ನಮ್ಮ ವಿವೇಕ ನಮಗೆ ಎಚ್ಚರಿಸುತ್ತದಲ್ಲವೇ? ಆ ಎಚ್ಚರಿಕೆಯೇ ದೇವರು’ ಎಂದು ಸ್ವಾಮೀಜಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-44-1389007882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.