ಹೊಸದುರ್ಗ: ಪಟ್ಟಣದ ಕಲ್ಲೇಶ್ವರ ಬಡಾವಣೆಯ ಹುಳಿಯಾರು ರಸ್ತೆ ಮಾರ್ಗದಲ್ಲಿರುವ ಗುರು ಶನೇಶ್ವರ ಸ್ವಾಮಿ ದೇವಾಲಯದಲ್ಲಿ 23ನೇ ವರ್ಷದ ಜಯಂತ್ಯುತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

ಬೆಳಗ್ಗೆ 7 ಗಂಟೆಯಿಂದ ಕೃಷ್ಣಮೂರ್ತಿ ಘನಪಾಠಿ ಸಂಗಡಿಗರಿಂದ ಧಾರ್ಮಿಕ ಕಾರ್ಯಗಳು ನೆರವೇರಿದವು.

ಜಯಂತೋತ್ಸವದ ಅಂಗವಾಗಿ ಮೂರು ದಿನಗಳಿಂದ ಶನೇಶ್ವರ ಸ್ವಾಮಿ ದೇವಾಲಯದಿಂದ ಸಾಯಿಬಾಬಾ ಮಂದಿರದವರೆಗೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಶನಿವಾರ ಬೆಳಿಗ್ಗೆ ಪಟ್ಟಣದ ಈಶ್ವರಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭಗೊಂಡ ಶನೇಶ್ವರ ಸ್ವಾಮಿಯ ಉತ್ಸವವನ್ನು ಪ್ರಮುಖ ಬೀದಿಗಳ ಮೂಲಕ ಮಧ್ಯಾಹ್ನ ದೇವಾಲಯಕ್ಕೆ ಕರೆತರಲಾಯಿತು. ಉತ್ಸವದಲ್ಲಿ ಮಂಗಳವಾದ್ಯ, ಡೊಳ್ಳು, ವೀರಗಾಸೆ, ಭಜನೆ, ಕೋಲಾಟ, ಚಿಟ್ಟಿಮೇಳಗಳು ಮೆರುಗು ತಂದವು.

ಭಕ್ತರು ಶನೇಶ್ವರನ ಅನುಗ್ರಹಕ್ಕಾಗಿ ಉಪವಾಸವಿದ್ದು ಎಳ್ಳು ಬತ್ತಿ ಹಚ್ಚಿದರು. ಶನೇಶ್ವರ ಜಯಂತೋತ್ಸವದ ಅಂಗವಾಗಿ ದೇವಾಲಯದಲ್ಲಿ ಸುಗಮ ಸಂಗೀತ, ಭಜನೆ ಹಾಗೂ ‘ಶನೇಶ್ವರ ಸ್ವಾಮಿಯ ಮಹಾತ್ಮೆ’ ಕಿರು ನಾಟಕ ಪ್ರದರ್ಶಿಸಲಾಯಿತು. ಹೊಳಲ್ಕೆರೆ, ತರೀಕೆರೆ, ತಿಪಟೂರು, ಹೊಸದುರ್ಗ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಶನೇಶ್ವರ ಭಕ್ತ ಮಂಡಳಿ ಅಧ್ಯಕ್ಷ ಸಿ. ಪ್ರಕಾಶ್, ಕಾರ್ಯದರ್ಶಿ ಎನ್.ರಾಜಣ್ಣ, ಅರ್ಚಕ ಮುರುಘೇಂದ್ರಯ್ಯ ಸೇರಿದಂತೆ ಶನೇಶ್ವರ ಭಕ್ತ ಮಂಡಳಿ ಸದಸ್ಯರು ಹಾಗೂ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-44-744831462

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.