ಹೊಸದುರ್ಗ: ಇಬ್ಬರಿಗೂ ಮಾತು ಬಾರದು.. ಹುಟ್ಟಿನಿಂದಲೇ ಮೂಗರು. ಆದರೆ ಪ್ರೀತಿ, ಅನುರಾಗಕ್ಕೆ ಮಾತೇಕೇ? ಮೌನ ರಾಗವೇ ಸಂಭಾಷಣೆ ಅಲ್ಲವೇ ಎಂದು ಅಪರೂಪದ ಜೋಡಿಯೊಂದು ಗುರುಹಿರಿಯರ ಸಮ್ಮಖದಲ್ಲಿ ಹಸೆಮಣೆ ಏರಿದೆ.

ಒಂದು ಹೆಣ್ಣಿಗೆ ಒಂದು ಗಂಡು ಎಂದು ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಎನ್ನುವುದಕ್ಕೆ ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಅದ್ದೂರಿಯಾಗಿ ನಡೆದ ವಿವಾಹವೇ ಸಾಕ್ಷಿಯಾಗಿದೆ.

ಹುಟ್ಟಿನಿಂದಲೇ ಮಾತು ಬಾರದ ಹೊಸದುರ್ಗ ತಾಲ್ಲೂಕಿನ ಹಳೆಮಳಲಿ ಗ್ರಾಮದ ಶೋಭಾ ಮತ್ತು ಪ್ರಕಾಶ್ ದಂಪತಿಯ ಪುತ್ರಿ ಪಿ. ಸಂಗೀತಾ ಹಾಗೂ ಕಡೂರು ತಾಲ್ಲೂಕಿನ ಕಾಮನಕೆರೆ ಗ್ರಾಮದ ಕೋಮಲ ಮತ್ತು ಶಿವಲಿಂಗಪ್ಪ ಅವರ ದ್ವಿತೀಯ ಪುತ್ರ ಕೆ.ಎಸ್. ಅವಿನಾಶ್ ಅವರು ನವ ದಾಂಪತ್ಯಕ್ಕೆಕಾಲಿಟ್ಟಿದ್ದಾರೆ.

ಸಂಗೀತಾ ಮತ್ತು ಅವಿನಾಶ್ ಮೈಸೂರಿನ ಜೆ.ಎಸ್.ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದರು. ಇಬ್ಬರ ಮನೆಯಲ್ಲೂ ಎರಡು ವರ್ಷಗಳಿಂದ ವಿವಾಹಕ್ಕೆ ವಧು–ವರರನ್ನು ಹುಡುಕುತ್ತಿದ್ದರು. ಹಲವು ಸಂಬಂಧಗಳು ಹುಡುಕಿಕೊಂಡು ಬಂದಿದ್ದರೂ ಒಪ್ಪಿಗೆ ಆಗಿರಲಿಲ್ಲ. ಈ ನಡುವೆ ಇಬ್ಬರಿಗೂ ಮೊದಲೇ ಪರಿಚಯ ಇದ್ದುದ್ದರಿಂದ ಮನೆಯವರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ. ಇದು ಅರೆಂಜ್ ಮ್ಯಾರೇಜ್ ಎಂದು ಸಂಗೀತಾ ಅವರ ತಂದೆ ಪ್ರಕಾಶ್ ಹೇಳಿದರು.

ಅವಿನಾಶ್ ಡಿಪ್ಲೊಮಾ ಇನ್ ಜ್ಯೂವೆಲ್ಲರಿ ಡಿಸೈನರ್ ವಿಭಾಗದಲ್ಲಿ ಅಧ್ಯಯನ ಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಜ್ಯೂವೆಲ್ಲರಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಗೀತಾ ಕೂಡ ದೊಡ್ಡಬಳ್ಳಾಪುರದ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-44-336401113

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.