ಹೊಸದುರ್ಗ: ತಾಲ್ಲೂಕಿನ ವಿವಿಧೆಡೆ ಗುರುವಾರ ಸಂಜೆ 30 ನಿಮಿಷ ಜೋರು ಮಳೆಯಾಗಿದ್ದು, ತಂಪಾದ ವಾತಾವರಣ ಮೂಡಿದೆ.

ಏಪ್ರಿಲ್ ತಿಂಗಳಲ್ಲಿ ಮಳೆ ಕಾಣದೆ, ಬಿರುಕು ಬಿಡುವ ಹಂತದಲ್ಲಿದ್ದ ಭೂಮಿಗೆ ಗುರುವಾರ ಸುರಿದ ಮಳೆ ತಂಪು ನೀಡಿದೆ.

ಅತ್ತಿಘಟ್ಟ ಗ್ರಾಮದಲ್ಲಿ ಜೋರು ಗುಡುಗು ಸಹಿತ ಗಾಳಿ ಮಳೆಯಿಂದಾಗಿ ತೆಂಗಿನ ಮರ ಸೇರಿ ಹಲವು ಮರಗಳು ಬಿದ್ದಿವೆ. ಅತ್ತಿಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಮೇಲೆ ಮರ ಬಿದ್ದಿದ್ದು, ಅಪಾರ ಹಾನಿಯಾಗಿದೆ. ಚಾವಣಿಯಲ್ಲಿದ್ದ ಹೆಂಚು ಹಾಗೂ ಶೀಟ್ ಒಡೆದಿವೆ.

ಗುರುವಾರ ಸಂಜೆ ಮೋಡಕವಿದ ವಾತಾವರಣವಿತ್ತು. ಗಾಳಿಯೂ ತುಸು ಜೋರಾಗಿಯೇ ಇತ್ತು. ಆಗಾಗ ಸೋನೆ ಮಳೆಯಾಗುತ್ತಿತ್ತು. ರಾತ್ರಿ 7 ಗಂಟೆಯಿಂದ ಸಿಡಿಲು, ಗುಡುಗು ಆರಂಭವಾಯಿತು. ಇದರ ನಡುವೆ ದಟ್ಟ ಮೋಡವಿದ್ದು, ರಭಸ ಮಳೆಯಾಗುವ ಮುನ್ಸೂಚನೆಯಿತ್ತು. ತಾಲ್ಲೂಕಿನ ವಿವಿಧೆಡೆ ತಕ್ಕಮಟ್ಟಿಗೆ ಮಳೆಯಾಗಿದ್ದು, ತಂಪಿನ ವಾತಾವರಣವಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-44-2038368868

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.