ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಮಸಾಗರ: ವಿಶೇಷ ಪೌಷ್ಟಿಕಾಂಶಯುಕ್ತ ಕತ್ತೆ ಹಾಲಿಗೆ ಹೆಚ್ಚಿದ ಬೇಡಿಕೆ

ಮನೆ ಮುಂದೆಯೇ ಹಾಲು ಕರೆದು ನೀಡುವ ವ್ಯಾಪಾರಿಗಳು
Last Updated 6 ಜನವರಿ 2019, 12:46 IST
ಅಕ್ಷರ ಗಾತ್ರ

ಭರಮಸಾಗರ(ಚಿತ್ರದು‌ರ್ಗ ಜಿಲ್ಲೆ): ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಕತ್ತೆ ಹಾಲಿಗೆ ಈಗ ಎಲ್ಲಿಲ್ಲದ ಬೇಡಿಕೆ.

ಪಟ್ಟಣದಲ್ಲಿ ಕೆಲ ದಿನಗಳಿಂದ ಬೆಳ್ಳಂಬೆಳಿಗ್ಗೆ ಕತ್ತೆ ಹಾಲಿನ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಮಕ್ಕಳಿಗೆ ₹ 50, ದೊಡ್ಡವರಿಗೆ ₹ 100 ಯಾರಿಗೆ ಬೇಕು ಕತ್ತೆಹಾಲು ಎಂದು ಕೂಗುತ್ತಾ ಇಲ್ಲಿನ ಬಡಾವಣೆಯ ಮಕ್ಕಳಿಗೆ ಹಾಲು ನೀಡುತ್ತಿದ್ದಾರೆ ತಮಿಳುನಾಡಿನ ಕುಮಾರ್ ಮತ್ತು ಅವರ ಕುಟುಂಬ.

ಕೆಮ್ಮು, ಜ್ವರ, ಕಫ, ಶೀತ ಸೇರಿ ಹಲವು ರೋಗಗಳಿಗೆ ಇದು ರಾಮಬಾಣವಂತೆ ಕೆಲಸ ಮಾಡುತ್ತದೆ ಎಂದು ತಿಳಿದಿರುವ ಜನ, ಕತ್ತೆ ಬಂದರೆ ಸಾಕು ಜನರು ತಮ್ಮ ಮಕ್ಕಳಿಗೆ ಕತ್ತೆ ಹಾಲನ್ನು ಕುಡಿಸಿ ತಾವು ಕೂಡ ಒಂದು ಸಿಪ್ ತೆಗೆದುಕೊಳ್ಳುತ್ತಾರೆ. ಕುಮಾರ್ ತಂಡ ಸುಮಾರು ಹನ್ನೆರಡು ಕತ್ತೆಗಳೊಂದಿಗೆ ಪ್ರತಿದಿನ ಬೆಳಿಗ್ಗೆ ಮನೆ ಮುಂದೆ ಹಾಲನ್ನು ಕರೆದು ಕೊಡುತ್ತಾರೆ.

‘ಕತ್ತೆ ಹಾಲನ್ನು ಬಿಸಿ ಮಾಡದೆ ನೀರು ಸೇರಿಸದೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ಒಳ್ಳೆಯದು. ಆದ್ದರಿಂದ ಬೆಳಿಗ್ಗೆ ಆರು ಗಂಟೆಯಾಗುತ್ತಲೇ ತಮ್ಮ ಕೆಲಸವನ್ನು ಆರಂಭಿಸುತ್ತೇವೆ’ ಎಂದು ಕುಮಾರ್‌ ಹೇಳುತ್ತಾರೆ.

ಒಂದು ಕತ್ತೆಯಿಂದ 250 ರಿಂದ 300 ಮಿ.ಲೀಟರ್‌ನಷ್ಟು ಮಾತ್ರ ಹಾಲು ಕರೆಯಲು ಸಾಧ್ಯ. ದಿನಕ್ಕೆ 500 ರಿಂದ 600 ಆದಾಯ ಸಿಗುತ್ತದೆ. ಕತ್ತೆಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ದೂರದೂರಿನಿಂದ ಬರುವ ಕತ್ತೆಗಳ ಹಾಲಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಅವರು ಹೇಳುತ್ತಾರೆ.

ಕತ್ತೆ ಹಾಲಿನಲ್ಲಿ ವಿಶೇಷ ಪೌಷ್ಠಿಕಾಂಶ ಇದೆ. ಕ್ಯಾನ್ಸ್‌ರ್ ನಿರೋಧಕವಾಗಿದೆ. ಹೃದಯ ಸಂಬಂಧಿ, ಅಕಾಲಿಕ ಕಾಯಿಲೆಗಳಿಗೆ ಈ ಹಾಲು ಉತ್ತಮ ಎಂದು ವಿಜ್ಞಾನಿಗಳು ಹೇಳಿದ್ದಾರೆ ಎಂದು ಜಾನುವಾರು ತಜ್ಞ ಡಾ.ದಿವಾಕರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT