ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದಲ್ಲಿ ಹೆಚ್ಚಿದ ದುರ್ಭಾವ: ಮುರುಘಾ ಶರಣರ ವಿಷಾದ

ಶಿವಮೂರ್ತಿ ಮುರುಘಾ ಶರಣರ ಬೇಸರ
Last Updated 5 ಆಗಸ್ಟ್ 2022, 2:24 IST
ಅಕ್ಷರ ಗಾತ್ರ

ಚಿತ್ರದುರ್ಗ: ದುಃಖವನ್ನು ತರುವ ದುರ್ಭಾವ ಮಾನವನ ಬದುಕಿನಲ್ಲಿ ಹೆಚ್ಚಾಗಿದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಸರಸ್ವತಿ ಕಾನೂನು ಕಾಲೇಜಿನಲ್ಲಿ ಗುರುವಾರ ನಡೆದ ‘ನಿತ್ಯ ಕಲ್ಯಾಣ; ಮನೆಮನೆಗೆ ಚಿಂತನ’ 6ನೇ ದಿನದ ಕಾರ್ಯಕ್ರಮದ ‘ದಾಸೋಹ ಪ್ರಜ್ಞೆ’ ಕುರಿತು ಮಾತನಾಡಿದರು.

‘ಮಾನವನ ಮಿದುಳಿನಲ್ಲಿ ಆಲೋಚನೆಗಳೆಂಬ ಮೋಡಗಳು ಬಂದು ಹೋಗುತ್ತವೆ. ಆದರೆ, ದುರಾಲೋಚನೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ವೇದನೆಯನ್ನು ನೀಡುವ ದುರಾಲೋಚನೆ, ದುರ್ಭಾವದಿಂದ ದೂರವಿರಲು ಪ್ರಯತ್ನಿಸಬೇಕು. ಮನುಷ್ಯನಿಗೆ ಸ್ವಾರ್ಥ ಭಾವಕ್ಕಿಂತ ಸಾರ್ಥಕ ಭಾವ ಇರಬೇಕು. ನಿರಹಂಕಾರವು ಜೀವನದ ಅಲಂಕಾರವನ್ನು ಹೆಚ್ಚಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಶರಣರ ಸಂದೇಶವನ್ನು ತಿಳಿದುಕೊಳ್ಳುವವರೆಗೆ ಸಮಾಜ ಬದಲಾಗುವುದಿಲ್ಲ. ಸತ್ಯಶುದ್ಧ ಕಾಯಕ ಮಾಡುವ ಸದ್ಭಕ್ತಿನಿಗೆ ಲಕ್ಷ್ಮಿ ಒಲಿಯುತ್ತಾಳೆ’ ಎಂದು ಸಿದ್ಧಯ್ಯನಕೋಟೆಯ ವಿಜಯಮಹಾಂತೇಶ್ವರ ಮಠದ ಬಸwವಲಿಂಗ ಸ್ವಾಮೀಜಿ ಹೇಳಿದರು.

ಸಾಹಿತಿ ಧನಂಜಯ ಮೆಂಗಸಂದ್ರ, ಕಲ್ಲಂ ಸೀತಾರಾಮರೆಡ್ಡಿ, ಕಲ್ಲಂ ಮಂಜುನಾಥರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT