ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮವಸ್ತ್ರ ನೀತಿ ಧಿಕ್ಕರಿಸಿದ್ದು ಸರಿಯೇ’-ಸಚಿವ ಸಿ.ಸಿ.ಪಾಟೀಲ

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಪ್ರಶ್ನೆ
Last Updated 11 ಫೆಬ್ರುವರಿ 2022, 4:02 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಒಬ್ಬರು ಸೂಟು–ಬೂಟು ಧರಿಸಿದರೆ, ಬಡವ ಹರಕು ಬಟ್ಟೆ ಧರಿಸುತ್ತಾನೆ. ಆ ಕಾರಣಕ್ಕೆ ಸಮಾನತೆ ಉದ್ದೇಶದಿಂದ ಸಮವಸ್ತ್ರ ನೀತಿ ರೂಪಿಸಲಾಗಿದೆ. ಆದರೆ ಸಮವಸ್ತ್ರ ನೀತಿಯನ್ನು ಧಿಕ್ಕರಿಸಿ ಧರ್ಮದ ಹಿಜಾಬ್ ಧರಿಸುವುದು ಎಷ್ಟರ ಮಟ್ಟಿಗೆ ಸರಿ. ರಾಜ್ಯದ ಕಾಲೇಜುಗಳಲ್ಲಿ ಇಷ್ಟು ದಿನ ಇಲ್ಲದ ವ್ಯವಸ್ಥೆಗೆ ಪ್ರೇರಣೆ ಕೊಟ್ಟವರು ಯಾರು’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಜಾಬ್, ಕೇಸರಿ ಶಾಲು ವಿವಾದ ನ್ಯಾಯಾಲಯದಲ್ಲಿರುವ ಕಾರಣ ಆ ವಿಷಯವನ್ನು ವಿಮರ್ಶಿಸಲು ಹೋಗುವುದಿಲ್ಲ. ಕೋರ್ಟ್ ತೀರ್ಪಿಗೆ ಬದ್ಧರಾಗಿ ಕೆಲಸ ನಿರ್ವಹಣೆ ಮಾಡುತ್ತೇವೆ’ ಎಂದರು.

‘ಹಿಜಾಬ್, ಕೇಸರಿ ಶಾಲು ಗಲಾಟೆಗೆ ಕಾರಣ ಯಾರೆಂದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT