ಕೈದಿಗಳಿಗೆ ಉದ್ಯಮಶೀಲತಾಭಿವೃದ್ಧಿ ತರಬೇತಿ

7

ಕೈದಿಗಳಿಗೆ ಉದ್ಯಮಶೀಲತಾಭಿವೃದ್ಧಿ ತರಬೇತಿ

Published:
Updated:
Deccan Herald

ಚಿತ್ರದುರ್ಗ: ಜಿಲ್ಲಾ ಕಾರಾಗೃಹದ ಕೈದಿಗಳಿಗೆ ರುಡ್‌ಸೆಟ್ ಸಂಸ್ಥೆಯಿಂದ 30 ದಿನ ನಡೆದ ಉದ್ಯಮಶೀಲತಾಭಿವೃದ್ಧಿ ಎಲೆಕ್ಟ್ರಿಕ್ ಮೋಟಾರ್ ರಿವೈಡಿಂಗ್ ಮತ್ತು ಪಂಪ್‌ಸೆಟ್ ರಿಪೇರಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಗುರುವಾರ ನಡೆಯಿತು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ, ‘ಎಲೆಕ್ಟ್ರಿಕ್ ತಂತ್ರಜ್ಞಾನದಲ್ಲಿ ಆಧುನಿಕತೆ ಹಾಗೂ ಗ್ರಾಹಕರ ಅನುಕೂಲಗಳಿಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳಾಗಿವೆ. ಕಾರಾಗೃಹದಿಂದ ಮುಕ್ತರಾದ ಬಳಿಕ ದುಡಿಮೆಯತ್ತ ಸದೃಢ ಹೆಜ್ಜೆ ಹಾಕಿ’ ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್. ದಿಂಡಲಕೊಪ್ಪ, ಅಚ್ಚಪ್ಪ ದೊಡ್ಡಬಸವರಾಜು, ವಕೀಲರ ಸಂಘದ ಅಧ್ಯಕ್ಷ ಎನ್.ಬಿ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸಿ.ಶಿವು ಯಾದವ್, ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ. ಲೋಕೇಶ್, ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ಎ.ಮುನಿರಾಜ್, ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕ ತೋಟಪ್ಪ ಎಸ್.ಗಾಣಿಗೇರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !