ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಡಿ.24ರಿಂದ ‘ಜಮುರಾ ನಾಟಕೋತ್ಸವ’

Last Updated 15 ನವೆಂಬರ್ 2021, 4:28 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜಮುರಾ ರಾಷ್ಟ್ರೀಯ ನಾಟಕೋತ್ಸವ’ವನ್ನು ಡಿ. 24ರಿಂದ 28ರವರೆಗೆ ಐದು ದಿನ ಆಯೋಜಿಸಲಾಗುತ್ತಿದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಮಠದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಈ ಮೊದಲು ಪೇಟೆಯೊಳಗೆ ನಾಟಕ ನಡೆಯುತ್ತಿತ್ತು. ಆದರೆ, ಕೆಲ ವರ್ಷಗಳಿಂದ ಶ್ರೀಮಠದ ಅನುಭವ ಮಂಟಪದಲ್ಲಿ ನಾಟಕೋತ್ಸವ ನಡೆಯುತ್ತಿದೆ’ ಎಂದರು.

ಎಂ.ಬಿ. ವಿಶ್ವನಾಥ್ ಮಾತನಾಡಿ, ‘ರಾಷ್ಟ್ರೀಯ ನಾಟಕೋತ್ಸವ ಆಗಿರುವುದರಿಂದ ಸೋದರ ಭಾಷೆಗಳ ನಾಟಕಗಳನ್ನು ಪ್ರದರ್ಶಿಸಬಹುದು. ಇತರೆ ಭಾಷೆಗಳ ನಾಟಕಗಳು ಹಾಸ್ಯಭರಿತವಾಗಿರಬೇಕು. ಇಂಗ್ಲಿಷ್ ನಾಟಕ ರಾಷ್ಟ್ರಪ್ರೇಮದ ಬಗ್ಗೆ ಇರಬೇಕು’ ಎಂದರು.

ಡಾ.ಬಿ. ರಾಜಶೇಖರಪ್ಪ, ಹಿರಿಯ ಕಲಾವಿದ ನಾಗರಾಜ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್, ಎಸ್.ವಿ. ನಾಗರಾಜಪ್ಪ, ನಗರಸಭಾ ಸದಸ್ಯ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT