ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಪ್ರಾಣಿಗಳ ದತ್ತು ಸ್ವೀಕರಿಸಿದ ಜಾನ್‌ಮೈನ್ಸ್‌

Last Updated 12 ಮಾರ್ಚ್ 2023, 6:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಾನ್‌ಮೈನ್ಸ್‌ನ ಆರ್‌. ಪ್ರವೀಣ್‌ ಚಂದ್ರ (ಇಆರ್‌ಎಂ ಗ್ರೂಪ್‌) ಅವರು ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‍ಆರ್) ನೀತಿಯಡಿ 2022–23ನೇ ಸಾಲಿಗೆ ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ 130 ಪ್ರಾಣಿಗಳನ್ನು ದತ್ತು ಸ್ವೀಕರಿಸಿದರು.

ಮೃಗಾಲಯದ ಅಭಿವೃದ್ಧಿಗೆ ಕೈ ಜೋಡಿಸಿರುವ ಸಂಸ್ಥೆ 130 ಪ್ರಾಣಿಗಳ ದತ್ತು ಸ್ವೀಕಾರಕ್ಕೆ ₹ 16 ಲಕ್ಷ ನೀಡಿದೆ. ಜತೆಗೆ ₹ 50.55 ಲಕ್ಷ ವೆಚ್ಚದಲ್ಲಿ ಮೃಗಾಲಯದ ಆಸ್ಪತ್ರೆ ಕಟ್ಟಡ ನಿರ್ಮಾಣ, 2021 –2022 ಸಾಲಿನಲ್ಲಿ ₹ 7.55 ಲಕ್ಷ ನೀಡಿ ಪ್ರಾಣಿಗಳನ್ನು ದತ್ತು ಸ್ವೀಕರಿಸಿದೆ.

ಸಂಸ್ಥೆಯಿಂದ ₹16 ಲಕ್ಷದ ಚೆಕ್‌ ಅನ್ನು ಚಿತ್ರದುರ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ (ಕರ್ನಾಟಕ ಮೃಗಾಲಯ ಪ್ರಾಧಿಕಾರ) ರಾಜಣ್ಣ ಅವರಿಗೆ ಹಸ್ತಾಂತರಿಸಿತು. ಈ ವೇಳೆ ಆಡುಮಲ್ಲೇಶ್ವರ ಕಿರು ಮೃಗಾಲಯದ ವಲಯ ಅರಣ್ಯ ಅಧಿಕಾರಿ ಎನ್‌. ವಾಸುದೇವ್‌, ಜಾನ್‌ಮೈನ್ಸ್‌ನ ಉಪ ಪ್ರಧಾನ ವ್ಯವಸ್ಥಾಪಕ ಎನ್‌. ರಣದೀವ್‌, ಸಿಎಸ್ಆರ್‌ ಮುಖ್ಯಸ್ಥ ಕೆ.ಎಸ್‌. ಮಂಜುನಾಥ್‌, ಅಜಿತ್‌ ಕುಮಾರ್‌ ಬಿ. ಮಾಳಿ, ಜಿ. ವಿನಯ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT