ಮೊಳಕಾಲ್ಮುರು: ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಮೂಲಕ ಜೀತಪದ್ಧತಿ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ನ್ಯಾಯಾಧೀಶರಾದ ಎಚ್.ಆರ್. ಹೇಮಾ ಹೇಳಿದರು.

ಆದರ್ಶ ಕೇಂದ್ರೀಯ ವಿದ್ಯಾಲಯದಲ್ಲಿ ಸೋಮವಾರ ಕಾನೂನು ಉಚಿತ ನೆರವು ಸಮಿತಿ, ತಾಲ್ಲೂಕು ಘಟಕದ ವಕೀಲರ ಸಂಘ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಜೀತ ಪದ್ಧತಿ ನಿರ್ಮೂಲನೆ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಕೆಲ ಕೌಟುಂಬಿಕ ಕಾರಣಗಳಿಂದ ಜೀತ ಪದ್ಧತಿ ನಡೆದುಕೊಂಡು ಬಂದಿತ್ತು. ಪ್ರಸ್ತುತ ಬೇರೆಬೇರೆ ಕಾರಣಗಳಿಂದಾಗಿ ಇದು ಮುಂದುವರಿದುಕೊಂಡು ಬಂದಿರಬಹುದು. ಜೀತ ಪದ್ಧತಿಯಿಂದ ಹೊರಬರಲು ಕಾನೂನಿನಲ್ಲಿ ಅಕವಾಶವಿದ್ದು, ಸಂತ್ರಸ್ತ್ರರು ನೆರವು ಪಡೆದುಕೊಳ್ಳಬಹುದು. ಇದಕ್ಕಾಗಿ ಕಾನೂನು ನೆರವು ಸಮಿತಿ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಮುದಾಯದಲ್ಲಿ ಎಲ್ಲಿಯಾದರೂ ಇಂತಹ ಪದ್ಧತಿ ಕಂಡುಬಂದಲ್ಲಿ ಕಾನೂನು ಪ್ರಾಧಿಕಾರಕ್ಕೆ ಮಾಹಿತಿ ನೀಡುವ ಮೂಲಕ ಜನರು ಸಹಕಾರ ನೀಡಬೇಕು ಎಂದು ಉಪನ್ಯಾಸ ನೀಡಿದ ವಕೀಲ ರಾಮಾಂಜನೇಯ ತಿಳಿಸಿದರು.

ಪ್ರಾಂಶುಪಾಲ ಡಿ. ಗೋವಿಂದಪ್ಪ ಅಧ್ಯಕ್ಷತೆ ವಹಿಸಿದ್ದರು.

ವಕೀಲರ ಸಂಘದ ತಾಲ್ಲೂಕು ಗಟಕದ ಅಧ್ಯಕ್ಷ ಪಿ.ಜಿ. ವಸಂತಕುಮಾರ್, ಉಪಾಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎ.ಕೆ. ತಿಮ್ಮಪ್ಪ, ಸರ್ಕಾರಿ ಅಭಿಯೋಜಕರಾದ ಕೆ. ಮೊಹಮದ್ ಶಂಶೀರ್ ಆಲಿ, ತಾಲ್ಲೂಕು ಪಂಚಾಯಿತಿ ಇಒ ಎಂ. ಹನುಮಂತಪ್ಪ, ಉಪ ಪ್ರಾಂಶುಪಾಲ ಎಂ. ಮಲ್ಲಿಕಾರ್ಜುನ್ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.