ನಗರ ವಾಣಿಜ್ಯೋದ್ಯಮವಾಗಲು ಕ್ರೀಡೆ ಸಹಕಾರಿ

7
ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ನಗರ ವಾಣಿಜ್ಯೋದ್ಯಮವಾಗಲು ಕ್ರೀಡೆ ಸಹಕಾರಿ

Published:
Updated:
Deccan Herald

ಚಿತ್ರದುರ್ಗ: ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ದೇಶದ ಯಾವ ನಗರ ಬೆಳೆಯುತ್ತದೋ ಅದು ವೇಗವಾಗಿ ವಾಣಿಜ್ಯೋದ್ಯಮದಲ್ಲೂ ಅಭಿವೃದ್ಧಿ ಆಗುತ್ತದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಶುಕ್ರವಾರದಿಂದ ಮೂರು ದಿನ ನಡೆಯಲಿರುವ 2018 ನೇ ಸಾಲಿನ ಜಿಲ್ಲಾ ಮಟ್ಟದ ಪುರುಷರ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿ (ಸಿಕೆಪಿಎಲ್) ಸೀಜನ್ - 2 ಉದ್ಘಾಟಿಸಿ ಅವರು ಮಾತನಾಡಿದರು.

ಕಬಡ್ಡಿ, ವಾಲಿಬಾಲ್ ಸೇರಿ ಯಾವುದೇ ಪಂದ್ಯಾವಳಿ ಆಗಲಿ ಪ್ರತಿ ವರ್ಷವೂ ಚಿತ್ರದುರ್ಗದಲ್ಲಿ ‘ಕ್ರೀಡಾ ಹಬ್ಬದ’ ಹೆಸರಿನಲ್ಲಿ ನಡೆಯಬೇಕು ಎಂಬುದು ನಮ್ಮ ಆಶಯವಾಗಿದ್ದು, ಅದರಂತೆ ಇಲ್ಲಿನ ಕ್ರೀಡಾಭಿಮಾನಿಗಳು ಅನೇಕ ವರ್ಷಗಳಿಂದಲೂ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದರು.

ಈ ಹಿಂದೆ ಕೋಟೆನಾಡಲ್ಲಿ ಪ್ರಖ್ಯಾತ ತಂಡಗಳು, ಕ್ರೀಡಾಪಟುಗಳು ಇದ್ದರು. ಮತ್ತೊಮ್ಮೆ ಅಂತಹ ವಾತಾವರಣ ನಿರ್ಮಿಸಲು ಮುಂದಾಗಬೇಕಿದೆ. ಕ್ರೀಡಾಪಟುಗಳನ್ನು ತಯಾರು ಮಾಡುವ ಜವಾಬ್ದಾರಿ ಇಲ್ಲಿನ ತರಬೇತುದಾರರಿಗೆ ಮಾತ್ರ ಸೀಮಿತವಲ್ಲ. ಅವರಿಗೆ ಪ್ರತಿಯೊಬ್ಬರು ಉತ್ತೇಜನ ನೀಡಬೇಕು. ಜತೆಗೆ ಕ್ರೀಡಾಪಟುಗಳು ಕೂಡ ಜಿಲ್ಲೆಯ ಖ್ಯಾತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕಿದೆ ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನವೀನ್ ಮಾತನಾಡಿ, ಪಾಳೆಗಾರರ ಕಾಲದಿಂದಲೂ ಕ್ರೀಡೆಗೆ ಇಲ್ಲಿ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ. ಅವರ ಕಾಲದಲ್ಲಿ ಕೋಟೆಯೊಳಗೆ ಕೆಲ ಅಂದಿನ ಕಾಲದ ಕ್ರೀಡೆಗಳು ನಡೆಯುತ್ತಿದ್ದವು. ಈಗ ಮೈದಾನಗಳಲ್ಲಿ ನಡೆಯುತ್ತಿದೆ ಎಂದರು.

ಈಚೆಗೆ ನಡೆದ ಏಷ್ಯನ್ ಗೇಮ್ಸ್‌ಗಳಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದು, ಯಾವ ರಾಷ್ಟ್ರಗಳಿಗೂ ಕಡಿಮೆ ಇಲ್ಲವೆಂಬಂತೆ ಸೆಡ್ಡು ಹೊಡೆದಿದ್ದಾರೆ. ಅದೇ ರೀತಿ ಚಿತ್ರದುರ್ಗದ ಹೆಸರನ್ನು ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಅವಿತರ ಶ್ರಮಿಸಿ ಎಂದು ಸಲಹೆ ನೀಡಿದರು.

ಸಿಕೆಪಿಎಲ್ ಅಧ್ಯಕ್ಷ ಟಿ.ಕೆ. ಬಸವರಾಜು, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್, ನಗರಸಭೆ ಸದಸ್ಯ ಚಂದ್ರಶೇಖರ್, ಉದ್ಯಮಿಗಳಾದ ತಾಜ್‌ಪೀರ್, ವಿ.ಜಿ.ಎಸ್. ರಾಜಣ್ಣ, ಧರಣಿ ಮೋಟಾರ್ಸ್ ಮಾಲೀಕ ಮಂಜುನಾಥ್, ವಕೀಲ ಕುಮಾರ್ ಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಸಮೀವುಲ್ಲಾ, ವಿವಿಧ ತಂಡಗಳ ಅಧ್ಯಕ್ಷರಾದ ಅಂಜಿನಪ್ಪ, ಎನ್‌.ಡಿ. ಕುಮಾರ್, ಕೆ.ಟಿ. ಶಿವಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !